ಶಿಕ್ಷಕರಲ್ಲಿ ಕ್ರಿಯಾಶೀಲತೆ ಬೆಳಯಲಿ: ಸಿ.ಜಿ.ಹಳ್ಳದ

Update: 2024-10-29 05:42 GMT

ಕಲಬುರಗಿ: ಶಾಲಾ ತರಗತಿಗಳಲ್ಲಿ ವೈವಿಧ್ಯ ಹಾಗೂ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಮುಖ್ಯವಾಗಿ ಶಿಕ್ಷಕರು ತಮ್ಮ ಬೋಧನೆಯಲ್ಲಿ ಕ್ರಿಯಾಶೀಲತೆ ಬೆಳಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ಹೇಳಿದ್ದಾರೆ.

ಆಳಂದ ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಹ ಚಟುವಟಿಕೆಗಳ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರಪ್ಪ ಬಡಿಗೇರ ಮಾತನಾಡಿ, ಶಿಕ್ಷಕರು ಸಹ ನಿರಂತರ ವಿದ್ಯಾರ್ಥಿಗಳಂತೆ ಅಧ್ಯಯನಶೀಲರಾಗಬೇಕು, ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ಜಿಲ್ಲಾ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಳ್ಳುವಂತ ಸ್ಪರ್ಧ ಪ್ರೇರಣೆ ನೀಡಲಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಸಂಜಯ ಪಾಟೀಲ ಮಾತನಾಡಿದರು.

ಅಕ್ಷರ ದಾಸೋಹ ಯೋಜನ ತಾಲೂಕಾಧಿಕಾರಿ ಚಂದ್ರಕಾಂತ ಕಾಂಬಳ, ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಆಸಗಿ, ಪ್ರೌಢ ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ಮಲ್ಲಿನಾಥ ಖಜೂರಿ, ಮುಖ್ಯಶಿಕ್ಷಕ ತಾನಾಜಿ ಕಾಂಬಳ, ಶಿವಯೋಗಪ್ಪ ಟಕ್ಕಳಕಿ, ರಾಮಪ್ಪ ನಾವಿ, ರಾಮಲಿಂಗಪ್ಪ ಖಂಡಾಳ, ವಿನೋಧ ಕುಲಕರ್ಣಿಶಂಕರ ಮೋಂಟಗಿ ಉಪಸ್ಥಿತರಿದ್ದರು.

ವೀರೇಶ ಬೋಳಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸತೀಶ ಸನ್ಮುಖ ಸ್ವಾಗತಿಸಿದರು. ನಾಗೇಂದ್ರ ಗಾಡ ವಂದಿಸಿದರು

ನಂತರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗಾಗಿ ಭಾವಗೀತೆ, ಆಶುಭಾಷಣ, ಪ್ರಬಂಧ, ಕಲಿಕೋಪಕರಣ ತಯಾರಿ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳು ಆಯೋಜಿಸಲಾಗಿತ್ತು. ನಂತರ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News