ಕಲಬುರಗಿ | ಲಾರಿ ಡ್ರೈವರ್ ಗೆ ಹೃದಯಾಘಾತ: ಸರಣಿ ಅಪಘಾತದಲ್ಲಿ ತರಕಾರಿ ವ್ಯಾಪಾರಿ ಮೃತ್ಯು

Update: 2025-02-20 22:36 IST
ಕಲಬುರಗಿ | ಲಾರಿ ಡ್ರೈವರ್ ಗೆ ಹೃದಯಾಘಾತ: ಸರಣಿ ಅಪಘಾತದಲ್ಲಿ ತರಕಾರಿ ವ್ಯಾಪಾರಿ ಮೃತ್ಯು
  • whatsapp icon

ಕಲಬುರಗಿ: ಕಂಟೆನರ್ ಲಾರಿ ಡ್ರೈವರ್ ಗೆ ಹೃದಯಾಘಾತದಿಂದ ಸರಣಿ ಅಪಘಾತ ಸಂಭಿಸಿದ ಪರಿಣಾಮ ತರಕಾರಿ ವ್ಯಾಪಾರಿ ಓರ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜೇವರ್ಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.

ಮಹಮದ್ ಅಲಿ (32) ಸ್ಥಳದಲ್ಲೇ ಮೃತಪಟ್ಟಿರುವ ತರಕಾರಿ ವ್ಯಾಪಾರಿ ಎಂದು ಗುರುತಿಸಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರದಿಂದ ಕಲಬುರಗಿ ಕಡೆಗೆ ಬರ್ತಿದ್ದ ಕಂಟೆನರ್ ಲಾರಿ ಡ್ರೈವರ್ ಗೆ ಜೇವರ್ಗಿ ಬಸ್ ನಿಲ್ದಾಣ ಬಳಿ ಹೃದಯಾಘಾತ ಆದ ಹಿನ್ನಲೆ ಆಟೋ, ಬೈಕ್ ಗಳಿಗೆ ಢಿಕ್ಕಿಯಾಗಿ ಬಳಿಕ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಲಾರಿ ನಿಂತಿದೆ ಎಂದು ತಿಳಿದುಬಂದಿದೆ.

ಹೃದಯಾಘಾತಕ್ಕೆ ಒಳಗಾದ ಲಾರಿ ಚಾಲಕನನ್ನು ‌ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಪಿಐ, ಪಿಎಸ್ಐ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಇರುವ 3 ದ್ವಿಚಕ್ರ ವಾಹನ ಮತ್ತು 3 ಆಟೋಗಳಿಗೆ ಹಾನಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News