ಕಲಬುರಗಿ | ವಕ್ಫ್ ತಿದ್ದುಪಡಿ ಮಸೂದೆ ಪ್ರತಿ ಹರಿದು ಪ್ರತಿಭಟನೆ
Update: 2025-04-02 21:59 IST

ಕಲಬುರಗಿ : ಸಂಸತ್ತಿನಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆಯು ಸಂವಿಧಾನ ವಿರೋಧಿಯಾಗಿದ್ದು, ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿ, ಎಸ್‌ಡಿಪಿಐ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಕ್ಫ್ ತಿದ್ದುಪಡಿ ಮಸೂದೆಯ ಕಾಗದ ಪ್ರತಿಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.
ಮಸೂದೆಯು ಸಮುದಾಯದ ಆಸ್ತಿಗಳ ಮೇಲೆ ಅನಗತ್ಯ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿದೆ. ಸಂವಿಧಾನ ಬಾಹಿರವಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಜನರ ಧ್ವನಿ ಜೋರಾಗಿಸಲು ಒಗ್ಗಟ್ಟಿನಿಂದ ವಿರೋಧ ವ್ಯಕ್ತಪಡಿಸಬೇಕೆಂದು ಪ್ರತಿಭಟನಾಕಾರರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಹಮ್ಮದ್ ಮೊಹ್ಸಿನ್, ಅಬ್ದುಲ್ ರಹೀಂ ಪಟೇಲ್, ಡಾ.ರಿಜ್ವಾನ್ ಅಹ್ಮದ್, ಸೈಯದ್ ಅಲೀಮ್ ಇಲಾಹಿ, ಅಜೀಜುಲ್ಲಾ ಸರಮಸ್ತ್, ಅಫ್ಜಲ್ ಮಹಮೂದ್ ಮತ್ತು ಹಲವಾರು ಇತರ ನಾಯಕರು ಉಪಸ್ಥಿತರಿದ್ದರು.