ಕಲಬುರಗಿ | ಹೊಂಡಕ್ಕೆ ಬಿದ್ದು ಕುರಿಗಾಯಿ ಮೃತ್ಯು

Update: 2025-04-09 11:09 IST
ಕಲಬುರಗಿ | ಹೊಂಡಕ್ಕೆ ಬಿದ್ದು ಕುರಿಗಾಯಿ ಮೃತ್ಯು

ಸಾಂದರ್ಭಿಕ ಚಿತ್ರ

  • whatsapp icon

ಕಲಬುರಗಿ : ಕುರಿಗಾಯಿಯೊರ್ವ ಮರಳು ದಕ್ಕಾದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ಬೆಳಗುಂಪಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಶ್ರೀಧರ್ ಅಮೃತ ನವಲಕರ್ (28) ಎಂದು ಗುರುತಿಸಲಾಗಿದೆ.

ಎಂದಿನಂತೆ ನಿತ್ಯ ಕುರಿಗಳನ್ನು ಕಾಯುತ್ತಾ ಹೋಗುತ್ತಿದ್ದ ಶ್ರೀಧರ್, ಶನಿವಾರ ಮನೆಗೆ ಬಾರದೇ ಇರುವುದರಿಂದ ಆತನ ಮನೆಯವರು ಎಲ್ಲಾ ಕಡೆಗಳಲ್ಲಿ ಹುಡುಕಿದ್ದರು. 3 ದಿನಗಳ ಬಳಿಕ ಮಂಗಳವಾರದಂದು ಮರಳುಗಾರಿಕೆಗಾಗಿ ತೋಡಿದ್ದ ಬೃಹತ್‌ ಕಾರದ ಗುಂಡಿಯಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೋಲಿ ಕಬ್ಬಲಿಗ ಸಮನ್ವಯ ಸಮಿತಿಯ ಜಿಲ್ಲಾ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ಗುಂಡು ಐನಾಪುರ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪುರ ಅವರ ನೇತೃತ್ವದಲ್ಲಿ ಸ್ಥಳಕ್ಕೆ ನೂರಾರು ಮುಖಂಡರು ದೌಡಾಯಿಸಿ ಪ್ರತಿಭಟಿಸಿದ್ದಾರೆ.

ಈ ವೇಳೆ ಮಾತನಾಡಿದ ಅವ್ವಣ್ಣ ಮ್ಯಾಕೇರಿ, ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ, ಒಂದು ಸರ್ಕಾರಿ ನೌಕರಿ, ಮನೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಶಹಾಬಾದ್‌ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಮಾಡಬೂಳ ಪಿಎಸ್‌ಐ ಶೀಲಾ ದೇವಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News