ಅಫಜಲಪುರ | ಪಿಯುಸಿ ಪರೀಕ್ಷೆಯಲ್ಲಿ ಗಂಗಾಧರ, ಸರಸ್ವತಿ ತಾಲೂಕಿಗೆ ಪ್ರಥಮ
Update: 2025-04-09 12:35 IST

ಕಲಬುರಗಿ : 2024-25ನೇ ಸಾಲಿನ ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಅಫಜಲಪುರ ತಾಲೂಕಿಗೆ ಕಲಾ ವಿಭಾಗದಲ್ಲಿ ಗಂಗಾಧರ ಜೇವರ್ಗಿ ಮತ್ತು ಸರಸ್ವತಿ ರಾಥೋಡ್ ಅವರು 600 ಅಂಕಗಳಿಗೆ 584 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಗಂಗಾಧರ ಅವರು ಅಫಜಲಪುರ ಪಟ್ಟಣದ ಮದರ್ ತೆರೇಸಾ ಕಾಲೇಜಿನ ವಿದ್ಯಾರ್ಥಿಯಾಗಿದ್ದರೆ, ಸರಸ್ವತಿ ರಾಥೋಡ್ ಅವರು ಪಟ್ಟಣದ ಎಪಿಜೆ ಅಬ್ದುಲ್ ಕಲಾಂ ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ.
ಇಬ್ಬರೂ ವಿದ್ಯಾರ್ಥಿಗಳ ಸಾಧನೆಗೆ ಅವರ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.