ಕಲಬುರಗಿ: ಅ.19ರಿಂದ ಎರಡು ದಿನ ಸ್ವಾಭಿಮಾನಿ ಕಲ್ಯಾಣ ಪರ್ವ ಸಮಾರಂಭ

Update: 2024-10-17 12:23 GMT

ಕಲಬುರಗಿ: ವಿಶ್ವಕ್ಕೆ ಪ್ರಜಾಪ್ರಭುತ್ವದ ಕೊಡುಗೆ ನೀಡಿದ ಬಸವಕಲ್ಯಾಣದಲ್ಲಿ ಅ. 19 ಮತ್ತು 20ರಂದು 'ಸ್ವಾಭಿಮಾನಿ ಕಲ್ಯಾಣ ಪರ್ವ-2024ರ' ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಬಸವ ದಳದ ಪ್ರಮುಖರಾದ ನಾಗೇಂದ್ರಪ್ಪ ನಿಂಬರಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಬಸವಕಲ್ಯಾಣದ ಬೇಗ್ ಸಭಾಮಂಟಪದ ಆವರಣದಲ್ಲಿ ಅ. 19ರಂದು ಬೆಳಿಗ್ಗೆ 11ಗಂಟೆಗೆ ನಡೆಯಲಿರುವ ಕಲ್ಯಾಣ ಪರ್ವ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು, ಡಾ. ಚನ್ನವೀರ ಶಿವಾಚಾರ್ಯ ಸ್ವಾಮಿ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದ ಕುರಿತು ಡಾ. ಚನ್ನಬಸವಾನಂದ ಸ್ವಾಮೀಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡುವರು, ಮಾತೆ ಸತ್ಯಾದೇವಿ, ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು, ಡಾ. ಜಯಬಸವಾನಂದ ಸ್ವಾಮಿಗಳು, ಮಾತೆ ಶಾಂತಾದೇವಿಯವರು, ಪೂಜ್ಯ ಶಂಕರಲಿಂಗ ಸ್ವಾಮಿಗಳ ದಿವ್ಯ ಸಮ್ಮುಖ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ಉದ್ಘಾಟಿಸುವರು, ಪೌರಾಡಳಿತ ಸಚಿವ ರಹೀಂ ಖಾನ್ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸುವರು, ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎಸ್.ಎಸ್. ನಾಗರಾಳೆ ಅವರು ವಚನ ಸಂಗಮ ಎಂಬ ಪುಸ್ತಕ ಬಿಡುಗಡೆ ಮಾಡುವರು. ಸಮಾರಂಭದಲ್ಲಿ ವಿವಿಧ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಅಂದು ಮಧ್ಯಾಹ್ನ 3.30ಗಂಟೆಗೆ ರಾಷ್ಟ್ರೀಯ ಬಸವದಳ ಯುವ ಗೋಷ್ಠಿಯಲ್ಲಿ ಲಿಂಗಾಯತ ಧರ್ಮದ ಹೋರಾಟದಲ್ಲಿ ಯುವಜನರ ಪಾತ್ರ ವಿಷಯದ ಮೇಲೆ ಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಂಸದ ಸಾಗರ ಖಂಡ್ರೆಯವರು ಉದ್ಘಾಟಿಸುವರು, ಸಂಜೆ 6ಗಂಟೆಗೆ ಧರ್ಮ ಚಿಂತನಾ ಗೋಷ್ಠಿಯಲ್ಲಿ ಸ್ವತಂತ್ರ ಲಿಂಗಾಯತ ಧರ್ಮ ಹೋರಾಟದ ಮುಂದಿನ ನಡೆ ಕುರಿತು ಚರ್ಚೆ ನಡೆಯಲಿದೆ. ಅ.20ರಂದು ಬೆಳಿಗ್ಗೆ 8.30ಗಂಟೆಗೆ ಡಾ. ಚನ್ನಬಸವಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿರುವ ಧರ್ಮ ಚಿಂತನಗೋಷ್ಠಿ-2 ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ನಂತರ ಸಮಾರೋಪ ಸಮಾರಂಭ ಜರುಗಲಿದೆ ಎಂದು ಎಂದರು. ಸುದ್ದಿಗೋಷ್ಠಿಯಲ್ಲಿ ಜಗದೇವಿ ಚಿಕ್ಕಿ, ಜ್ಯೋತಿ ಕಟ್ಟಾಳೆ, ಸಂತೋಷ ಕಟ್ಟಾಳೆ, ಶರಣು ಮಹಾಜನ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News