ವರ್ತಮಾನದ ಗಾಯಗಳಿಗೆ ವಚನ ಸಾಹಿತ್ಯ ಮದ್ದು : ಸಾಹಿತಿ ವಿನಯಾ ಒಕ್ಕುಂದ

Update: 2024-10-26 11:48 GMT

ಕಲಬುರಗಿ : ಇಂದಿನ ವರ್ತಮಾನದ ಗಾಯಗಳಿಗೆ ವಚನ ಸಾಹಿತ್ಯದಲ್ಲಿ ಮದ್ದು ಇದೆ ಎಂದು ಧಾರವಾಡದ ಸಾಹಿತಿ ವಿನಯಾ ಒಕ್ಕುಂದ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ಷನ್‌ ಹಾಲ್‌ನಲ್ಲಿ ಶನಿವಾರದಿಂದ ನಡೆಯುತ್ತಿರುವ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಮೊದಲ ಗೋಷ್ಠಿಯಲ್ಲಿ 'ಒಳಗೆ ಸುಳಿವ ಆತ್ಮ' ಎಂಬ ವಿಷಯ ಕುರಿತು ಮಾತನಾಡಿದ ಅವರು, ʼವಚನ ಸಾಹಿತ್ಯವನ್ನು ಈವರೆಗೆ ಸಾಂಪ್ರದಾಯಿಕ ಓದು, ಪ್ರಗತಿಪರ ಓದು, ನಿರಾಕರಣೆಯ ಓದು ನಿಟ್ಟಿನಲ್ಲಿ ಅಧ್ಯಯನ ಮಾಡುತ್ತಾ ಬರಲಾಗಿದೆ. ಸ್ತ್ರೀ-ಪುರುಷ ಸಮಾನತೆಯನ್ನು ಆದ್ಯತೆಯ ಪ್ರಶ್ನೆಯಾಗಿ ಸ್ವೀಕಾರ ಮಾಡಬೇಕುʼ ಎಂದರು.

ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ. ಗಂಡು ಅಲ್ಲ. ಅದು ಶರಣ ಚಳವಳಿಯಾಗಿದೆ. ಹೆಣ್ಣಿನ ಸಮಸ್ಯೆ ಅಷ್ಟು ಸುಲಭವಾಗಿ ಅರ್ಥೈಸುವುದು ಕಷ್ಟ ಸಾಧ್ಯದ ಕೆಲಸ ಎಂದು ಹೇಳಿದರು.

ಶರಣ ಕ್ರಾಂತಿಯ ದೀವಿಗೆಗೆ ಎಣ್ಣೆಯಾದವರು, ಬತ್ತಿಯಾದವರು, ಬೆಳಕಾದವರು ಶಿವಶರಣೆಯರು. ಸತ್ಯಕ್ಕೆ ಮುಖಾಮುಖಿಯಾಗುವ ಧೈರ್ಯ ನಮಗಿಲ್ಲ. ಅಕ್ಕಮಹಾದೇವಿ ಶರಣ ಸಂದರ್ಭದ ಬಹಳ ದೊಡ್ಡ ವ್ಯಕ್ತಿತ್ವ. ಅವರೊಳಗೆ ಅಧ್ಯಾತ್ಮಶಕ್ತಿ ಇತ್ತು ಎಂದು ವಿಷಯ ಮಂಡಿಸಿದರು.

'ಮಡದಿ ಎಂಬ ಶಬ್ದ ನಿಶ್ಯಬ್ದವಾದೊಡೆ' ಎಂಬ ವಿಷಯ ಕುರಿತು ಬೆಂಗಳೂರಿನ ಡಾ.‌ಬಸವರಾಜ ಸಾದರ ಮಾತನಾಡಿದರು.

ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಆಶ್ರಮದ ಡಾ.ಪ್ರಭುಶ್ರೀ ತಾಯಿ, ಡಾ.ಚಂದ್ರಕಲಾ ಬಿದರಿ, ಉಮಾ ಬಸವರಾಜ ಗಾದಗೆ, ಬಸವರಾಜ ಚಾಂದಕವಟೆ, ಡಾ.ಉಷಾದೇವಿ ಹಿರೇಮಠ, ವಿಶಾಲಾಕ್ಷಿ ಕರಡ್ಡಿ ಇತರರು ವೇದಿಕೆಯಲ್ಲಿದ್ದರು.

ಡಾ.‌ಕರುಣಾ ಜಮುದ್ರಖಾನಿ ನಿರೂಪಿಸಿದರು. ಡಾ.ಶಾಂತಾಮಠ ಸ್ವಾಗತಿಸಿದರು. ಡಾ.ಸಾವಿತ್ರಿ ಪಟ್ಟಣ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News