ಟೋಪಿಯಾಗಿರಲಿ, ಅಯ್ಯಪ್ಪ ಮಾಲೆಯಾಗಿರಲಿ ಧರ್ಮಾಚರಣೆಗೆ ನಿಯಮ ಅಡ್ಡಬರುವುದಿಲ್ಲ: ಬಿಎಂಟಿಸಿ

ಮಹಿಳೆಯ ನಡೆಯ ಬಗ್ಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ಬಿಎಂಟಿಸಿ ಸ್ಪಷ್ಟನೆ ನೀಡಿದೆ.

Update: 2023-07-15 09:02 GMT
Editor : Muad | Byline : ವಾರ್ತಾಭಾರತಿ

Photo: Twitter Screengrab

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿರುವ ವೀಡಿಯೋದಲ್ಲಿ ಮುಸ್ಲಿಂ ಟೋಪಿ ಧರಿಸಿದ್ದ ಕಂಡಕ್ಟರ್‌ ಓರ್ವರಿಗೆ ಮಹಿಳೆಯೋರ್ವರು ಅವರ ಧಿರಿಸಿನ ಕುರಿತು ವಾಗ್ವಾದ ನಡೆಸಿದ್ದು ದಾಖಲಾಗಿತ್ತು. ಈ ಕುರಿತು ಸಾಮಾಜಿಕ ತಾಣದಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯ ನಡೆಯ ಬಗ್ಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ಬಿಎಂಟಿಸಿ ಸ್ಪಷ್ಟನೆ ನೀಡಿದೆ.

ವೀಡಿಯೋ ಉದ್ದಕ್ಕೂ, ಮಹಿಳೆಯು ತನ್ನ ಸಮವಸ್ತ್ರದೊಂದಿಗೆ ಟೋಪಿ ಧರಿಸಿದ್ದ ಕಂಡಕ್ಟರ್ ಅನ್ನು ನಿರಂತರವಾಗಿ ಪ್ರಶ್ನಿಸಿದ್ದಳು. ಇದಕ್ಕೆ ಪ್ರತಿಕ್ರಿಯಿಸಿದ ಕಂಡಕ್ಟರ್, ಯಾವುದೇ ಆಕ್ಷೇಪಣೆಯಿಲ್ಲದೆ ಹಲವು ವರ್ಷಗಳಿಂದ ಕ್ಯಾಪ್ ಧರಿಸಿದ್ದನ್ನು ಉಲ್ಲೇಖಿಸಿ ತನ್ನ ಆಯ್ಕೆಯನ್ನು ನಯವಾಗಿ ಸಮರ್ಥಿಸಿಕೊಂಡಿದ್ದರು.

ಈ ಕುರಿತು 'ವಾರ್ತಾ ಭಾರತಿ'ಯೊಂದಿಗೆ ಮಾತನಾಡಿದ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ, "ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಶಿವಾಜಿನಗರದಿಂದ ಉತ್ತರಹಳ್ಳಿಗೆ ಹೋಗುವ ದಾರಿಯಲ್ಲಿ ಘಟನೆ ನಡೆದಿತ್ತು. ಈ ಕುರಿತು ನಾವು ಯಾವುದೇ ತನಿಖೆಗೆ ಆದೇಶ ನೀಡಿಲ್ಲ. ಯಾವುದೇ ಕೇಸು ಕೂಡಾ ಫೈಲ್‌ ಆಗಿಲ್ಲ. ನಾವು ಆ ಮಹಿಳೆಯ ಗುರುತನ್ನೂ ಹುಡುಕುತ್ತಿಲ್ಲ" ಎಂದು ಹೇಳಿದರು.

''ಸಮವಸ್ತ್ರ ಅಥವಾ ಇನ್ನಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಂಸ್ಥೆ (ಬಿಎಂಟಿಸಿ) ನಿಯಮವು ನಲ್ವತ್ತು ವರ್ಷಗಳಿಂದ ಒಂದೇ ರೀತಿಯಿದೆ. ಅದು ಅಯ್ಯಪ್ಪ ಮಾಲೆಯಾಗಿರಲಿ ಅಥವಾ ಇನ್ನಾವುದೇ ಗುರುತಾಗಲಿ, ಧರಿಸುವುದನ್ನು ನಮ್ಮ ನಿಯಮವು ವಿರೋಧಿಸಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News