ಮಾರ್ಚ್ 1 ರಂದ ತಾಜುಶ್ಶರೀಅ ಅಲೀಕುಂಞಿ ಉಸ್ತಾದ್ ಅವರ 3ನೇ ಆಂಡ್ ನೇರ್ಚೆ
ಉಳ್ಳಾಲ: ಸಮಸ್ತದ ಉಪಾಧ್ಯಕ್ಷರಾಗಿದ್ದ ಧಾರ್ಮಿಕ ವಿದ್ವಾಂಸ ತಾಜುಶ್ಶರೀಅ ಅಲೀಕುಂಞಿ ಉಸ್ತಾದ್ ಅವರ 3ನೇ ಉರೂಸ್ ಕಾರ್ಯಕ್ರಮವು ಮಾರ್ಚ್ 1 ರಿಂದ 3 ರ ವರಗೆ ಕಾಸರಗೋಡು ಬಂದ್ಯೋಡ್ ಸಮೀಪದ ಶಿರಿಯ ದಲ್ಲಿ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಿದ್ದೀಕ್ ಮೋಂಟುಗೊಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 1ರಂದು ಸಯ್ಯಿದ್ ಮುಟ್ಟಂ ತಂಙಳ್ ಅವರ ನೇತೃತ್ವದಲ್ಲಿ ಮಖ್ಬರ ಝಿಯಾರತ್ ನಡೆಯಲಿದೆ. ಬಿ.ಎಸ್.ಅಬ್ದುಲ್ಲಾಕುಂಞಿ ಫೈಝಿಯವರು ಧ್ವಜಾರೋಹಣ ಮಾಡಲಿರುವರು. ಸಯ್ಯಿದ್ ಎಂ.ಎಸ್. ಮದನಿ ತಂಬಳ್ ಅವರ ನೇತೃತ್ವದಲ್ಲಿ ಖತ್ಮುಲ್ ಕುರ್ ಆನ್ ಮಜ್ಜಿಸ್ ನಡೆಯಲಿದೆ.
ಸ್ವಲಾತುಲ್ ಹುಳೂರ್ ಮಜ್ಜಿಸ್ ನೇತೃತ್ವವನ್ನು ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಳ್ ಪೊಸೋಟು ವಹಿಸಲಿರುವರು. ಡಾ. ಮುಹಮ್ಮದ್ ಫಾರೂಕ್ ನಈಮಿ ಕೊಲ್ಲಂ ಅವರು ಮುಖ್ಯ ಪ್ರಭಾಷಣ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಮಾರ್ಚ್ 2 ರಂದು ಜಲೀಲ್ ಸಖಾಫಿ ಚೆರುಶೋಲ ಅವರಿಂದ ಮಜ್ಲಿಸ್ ಸಂಗಮ ನಡೆಯಲಿದೆ. ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕಣ್ಣವಂ ಅವರ ನೇತೃತ್ವದಲ್ಲಿ ಮಹ್ಳರತುಲ್ ಬದ್ರಿಯಾ ನಡೆಯಲಿದೆ. ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಅವರು ಉರೂಸ್ ನಿಹಾಯವನ್ನು ಉದ್ಘಾಟಿಸಲಿದ್ದಾರೆ.
ಮಾರ್ಚ್ 3 ರಂದು ಸಯ್ಯಿದ್ ಹಾಮಿದ್ ತಂಙಳ್ ಮಂಜೇಶ್ವರಂ ಅವರ ನೇತೃತ್ವದಲ್ಲಿ ಖತ್ಮುಲ್ ಖುರ್ʼಆನ್‌ಪಾರಾಯಣ , ಸ್ವಾಲಿಹ್ ಸಅದಿ ತಳಿಪ್ಪರಂಬ ಅವರ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಲಿದೆ. ಸಯ್ಯದ್ ಮುನೀರುಲ್ ಅಹ್ದಲ್ ತಂಙಳ್ ಅವರ ನೇತೃತ್ವದಲ್ಲಿ ತಹ್ಲೀಲ್ ಮಜ್ಲಿಸ್ ನಡೆಯಲಿದ್ದು, ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ, ಕಡಲುಂಡಿ ತಂಙಳ್ ಅವರು ಸಮಾರೋಪ ಪ್ರಾರ್ಥನೆ ನೆರವೇರಿಸಲಿದ್ದಾರೆ. ಬಳಿಕ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಡಿ.ಕೆ.ಉಮರ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ, ಅನಸ್ ಸಿದ್ದೀಕಿ ಶಿರಿಯ, ಮುಹಮ್ಮದ್ ಸಖಾಫಿ ಕೂಳೂರು, ಕೆಎಂಕೆ ಮಂಜನಾಡಿ ಉಪಸ್ಥಿತರಿದ್ದರು.