ಕಾಸರಗೋಡು | ದೇವಸ್ಥಾನದ ಉತ್ಸವ ವೇಳೆ ಪಟಾಕಿ ಅವಘಡ; ಮತ್ತೋರ್ವ ಮೃತ್ಯು

Update: 2024-11-09 06:46 GMT

ಕಾಸರಗೋಡು: ನೀಲೇಶ್ವರ ವಿರಾರ್ ಕಾವ್ ದೈವ ಸ್ಥಾನದ ಕಳಿಯಾಟ್ಟಂ ಮಹೋತ್ಸವ ದ ಸಂದರ್ಭದಲ್ಲಿ ನಡೆದ ಸುಡುಮದ್ದು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.

ಮೃತ ವ್ಯಕ್ತಿಯನ್ನು ನೀಲೇಶ್ವರ ಕಿನಾವೂರು ಮುಂಡೊಟ್ ನ ರಜೀತ್ ಎಂದು ಗುರುತಿಸಲಾಗಿದೆ. ಇವರು ಕಾಸರಗೋಡು ಕೆ ಎಸ್ ಇ ಬಿ ಚಾಲಕರಾಗಿದ್ದರು. ನೀಲೇಶ್ವರ ವಿರಾರ್ ಕಾವ್ ದೈವಸ್ಥಾನದಲ್ಲಿ ನಡೆದ ಸುಡುಮದ್ದು ಸ್ಫೋಟದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ  ಮೃಪಟ್ಟಿದ್ದಾರೆ.

ಇನ್ನೂ 50 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News