ಜಿವಿಎಚ್‌ಎಸ್‌ಎಸ್‌ ಕುಂಜತ್ತೂರು ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಕೂಟ, ಗುರುವಂದನಾ ಕಾರ್ಯಕ್ರಮ

Update: 2024-08-26 12:47 GMT

ಕುಂಜತ್ತೂರು: ಜಿವಿಎಚ್‌ಎಸ್‌ಎಸ್‌ ಕುಂಜತ್ತೂರು ಶಾಲೆಯ 1991-92ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳು ಸೇರಿ ಸ್ನೇಹ ಕೂಟ ಹಾಗೂ ಗುರು ವಂದನಾ ಕಾರ್ಯಕ್ರಮವನ್ನು ಶಾಲೆಯಲ್ಲಿ ರವಿವಾರ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಹ್ಮಾನ್ ಹಾಗೂ‌ ಶಂಕರ್ ಕುಂಜತ್ತೂರು ಉಪಸ್ಥಿತರಿದ್ದರು. ಗ್ರಾಮಾಧಿಕಾರಿ ಬಾಯರ್  ಅಧ್ಯಕ್ಷತೆ ವಹಿಸಿದ್ದರು.


ಜಿವಿಎಚ್‌ಎಸ್‌ಎಸ್‌ ಕುಂಜತ್ತೂರು ಶಾಲೆಯ ಮುಖ್ಯೋಪಾಧ್ಯಯರಾದ ಬಾಲಕೃಷ್ಣ ಉದ್ಘಾಟನೆ ಮಾಡಿದರು. 1991-92ನೇ ಸಾಲಿನ 10ನೇ ತರಗತಿಯ 75 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. 16 ಮಂದಿ ಶಿಕ್ಷಕರಿಗೆ ಗುರು ವಂದನೆ ಸಲ್ಲಿಸಿ ಅವರನ್ನು ಸನ್ಮಾನಿಸಲಾಯಿತು.

2024ನೇ ಸಾಲಿನ 10ನೇ ತರಗತಿಯಲ್ಲಿ ಅಧಿಕ ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಫಾತಿಮತ್ ಅನಾ ಮತ್ತು ಶಮನಾಝ್‌ ಅವರನ್ನು ಸ್ಮರಣಿಕೆ ಹಾಗೂ ನಗದು ಹಣ ನೀಡಿ ಗೌರವಿಸಲಾಯಿತು.


ಗಣೇಶ ಕುಂಜತ್ತೂರು ಸ್ವಾಗತಿಸಿದರು ಹಾಗೂ ಮೊಯಿದಿನ್ ಕುಟ್ಟಿ ವಂದಿಸಿದರು. ಮೋಹಿತ್ ಕಾರ್ಯಕ್ರಮ ನಿರೂಪಿಸಿದರು. ಉಸ್ಮಾನ್ ಖಾದರ್, ದಿವಾಕರ್ ಶೆಟ್ಟಿ, ಲವೀನಾ, ಅಬ್ದುಲ್ ಖಾದರ್, ಅಬ್ದುಲ್ ಮಜೀದ್ ಹಾಗು ಇತರರು ಉಪಸ್ಥಿತರಿದ್ದರು.

1991-92 ಬ್ಯಾಚ್ ನ ವಿದ್ಯಾರ್ಥಿಗಳು ಶಾಲೆಗೆ ಕುಡಿಯುವ ನೀರಿನ ವಾಟರ್ ಫಿಲ್ಟರ್ ಫ್ರಿಡ್ಜ್ ಕೊಡುಗೆಯಾಗಿ ನೀಡಿದರು.








 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News