ಕಾಸರಗೋಡು| ಆಟೋ ಚಾಲಕ ಆತ್ಮಹತ್ಯೆ ಪ್ರಕರಣ: ಸಬ್‌ಇನ್ಸ್‌ಪೆಕ್ಟರ್ ಅನೂಪ್ ಅಮಾನತು

Update: 2024-10-11 13:18 GMT

ಆಟೋ ಚಾಲಕನ ಕಾಲರ್ ಹಿಡಿದ ಸಬ್‌ಇನ್ಸ್‌ಪೆಕ್ಟರ್ ಅನೂಪ್

ಕಾಸರಗೋಡು: ನಗರದ ಆಟೋ ರಿಕ್ಷಾ ಚಾಲಕ ಅಬ್ದುಲ್ ಸತ್ತಾರ್ ರವರ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಆರೋಪಕ್ಕೆ ಒಳಗಾದ ಚಂದೇರ ಠಾಣಾ ಸಬ್ ಇನ್ಸ್‌ಪೆಕ್ಟರ್ ಪಿ. ಅನೂಪ್ ನನ್ನು ಅಮಾನತುಗೊಳಿಸಲಾಗಿದೆ.

ಕಾಸರಗೋಡು ನಗರ ಠಾಣಾ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಪಿ. ಅನೂಪ್ ನನ್ನು ಆರೋಪದ ಹಿನ್ನಲೆಯಲ್ಲಿ ಚಂದೇರ ಠಾಣೆಗೆ ವರ್ಗಾಯಿಸಲಾಗಿತ್ತು.

ಸೋಮವಾರ ಅಬ್ದುಲ್ ಸತ್ತಾರ್ ರೈಲ್ವೆ ನಿಲ್ದಾಣ ಸಮೀಪದ ಕ್ವಾ ಟರ್ಸ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದರು. ನಗರದ ರಸ್ತೆಯೊಂದರಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ಅಬ್ದುಲ್ ಸತ್ತಾರ್ ಅವರ ಆಟೋ ರಿಕ್ಷಾವನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು. ಹಲವು ಬಾರಿ ಠಾಣೆಗೆ ಹೋಗಿ ಕೇಳಿಕೊಂಡರೂ ಆಟೋ ರಿಕ್ಷಾ ಬಿಟ್ಟು ಕೊಡಲು ಮುಂದಾಗಲಿಲ್ಲ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದರು.

ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಎಸ್ಪಿ ಬಾಲಕೃಷ್ಣನ್ ನಾಯರ್ ಗೆ ಆದೇಶ ನೀಡಲಾಗಿತ್ತು. ಇದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ .ಶಿಲ್ಪಾ ಅವರಿಗೆ ವರದಿ ನೀಡಲಾಗಿತ್ತು. ಬಳಿಕ ಸಬ್ ಇನ್ಸ್ ಪೆಕ್ಟರ್ ಅನೂಪ್ ನನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಅನೂಪ್ ನನ್ನು ಅಮಾನತುಗೊಳಿಸುವಂತೆ ಆಟೋ ಚಾಲಕರ ಸಂಘ, ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಒತ್ತಾಯಿಸಿದ್ದವು, ಪ್ರತಿಭಟನೆಗೂ ಮುಂದಾಗಿದ್ದವು. ಇದಲ್ಲದೆ ಸಬ್ ಇನ್ಸ್ ಪೆಕ್ಟರ್ ಅನೂಪ್ ವಿರುದ್ಧ ಇನ್ನಿತರ ಆರೋಪಗಳು ಕೇಳಿ ಬಂದಿವೆ. ಕಾಸರಗೋಡು ನಗರದಲ್ಲಿ ಆಟೋ ಚಾಲಕನ ಜೊತೆ ಅನೂಪ್ ಅನುಚಿತವಾಗಿ ವರ್ತಿಸುವ ವಿಡಿಯೋ ಹೊರಬಂದಿದ್ದು, ಕ್ಷುಲ್ಲಕ ಕಾರಣಕ್ಕಾಗಿ ಆಟೋ ಚಾಲಕನ ಕಾಲರ್ ಹಿಡಿದು ಕಸ್ಟಡಿಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News