ಕೇರಳ ವಿವಿ ಉಪ ಕುಲಪತಿ ಪ್ರೊ. ವೆಂಕಟೇಶ್ವರಲು ನಿಧನ
Update: 2023-10-28 08:05 GMT
ಕಾಸರಗೋಡು : ಕೇರಳ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ. ವೆಂಕಟೇಶ್ವರಲು (64) ಇಂದು ಮುಂಜಾನೆ ಹೈದರಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರು ಕರುಳು ಸಂಬಂಧಿ ರೋಗದಿಂದ ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
2020ರ ಆಗಸ್ಟ್ 14 ರಂದು ಪ್ರೊ. ವೆಂಕಟ ಟೇಶ್ವರಲು ಕೇರಳ ಕೇಂದ್ರ ವಿಶ್ವ ವಿದ್ಯಾನಿಲಯದ ಮೂರನೇ ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು. 25 ವರ್ಷ ಗಳಿಂದ ಹೈದರಬಾದ್ ನ ಉಸ್ಮಾನಿಯಾ ವಿಶ್ವ ವಿದ್ಯಾನಿಲಯದ ಕಾಮರ್ಸ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು.