ಸಿರಿಬಾಗಿಲಿನಲ್ಲಿ 'ಮಂಜುನಾದ' ಸಂಗೀತ ಕಛೇರಿ

Update: 2023-07-30 06:03 GMT

ಕಾಸರಗೋಡು: ಮಣಿ ಕೃಷ್ಣ ಸ್ವಾಮಿ ಅಕಾಡಮಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಕೃತಿಗಳಾಧರಿತ 14ನೇ ಸಂಗೀತ ಕಛೇರಿ 'ಮಂಜುನಾದ' ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯಿತು.

ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಡಿನಾಡು ಕಾಸರಗೋಡಿನಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಿರಿಬಾಗಿಲು ಪ್ರತಿಷ್ಠಾನದ ಕಾಯಕ ಶ್ಲಾಘನೀಯ ಎಂದರು.

ಧಾರ್ಮಿಕ ಮುಂದಾಳು ಶ್ರೀ ವೆಂಕಟ್ರಮಣ ಹೊಳ್ಳ ಕಾಸರಗೋಡು, ನಿವೃತ್ತ ಪ್ರಾಧ್ಯಾಪಕ ಪ್ರೊ.ಶ್ರೀನಾಥ್, ಶ್ರೀ ಮೋಹನದಾಸ್ ಶೆಟ್ಟಿ ಸಿರಿಬಾಗಿಲು, ಸಂಗೀತ ವಿದುಷಿ ರಾಧಾ ಮುರಳೀಧರನ್, ಶ್ರೀ ಲಕ್ಷ್ಮೀ ನಾರಾಯಣ ಕಾವುಮಠ, ಮಣಿ ಕೃಷ್ಣ ಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಶ್ರೀ ನಿತ್ಯಾನಂದ ರಾವ್ ಪೇಜಾವರ ಉಪಸ್ಥಿತರಿದ್ದರು.

ಸಿರಿಬಾಗಿಲು ರಾಮಕೃಷ್ಣ ಮಯ್ಯ ಸ್ವಾಗತಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೇಯಾ ಕೊಳತ್ತಾಯ ಸುರತ್ಕಲ್, ಉಷಾ ರಾಮಕೃಷ್ಣ ಭಟ್ ಕಿನ್ನಿಗೊಳಿ, ಶರಣ್ಯಾ ಕೆ.ಎಸ್. ಸುರತ್ಕಲ್, ಸುಮೇಧಾ ಕೆ.ಎನ್. ಮೇಧಾ ಉಡುಪ ಮಂಗಳೂರು ಇವರಿಂದ ಮಂಜುನಾದ ಸಂಗೀತ ಕಛೇರಿ ನಡೆಯಿತು, ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ, ಮೃದಂಗ ದಲ್ಲಿ ಕೌಶಿಕ್ ರಾಮಕೃಷ್ಣನ್ ಕಾಸರಗೋಡು ಸಹಕರಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News