ಕಾರಡ್ಕ ಕೃಷಿ ಸಹಕಾರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ ಪ್ರಕರಣ: ಮೂವರು ಆರೋಪಿಗಳ ಸೆರೆ

Update: 2024-05-17 06:48 GMT
ಕಾರಡ್ಕ ಕೃಷಿ ಸಹಕಾರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ ಪ್ರಕರಣ: ಮೂವರು ಆರೋಪಿಗಳ ಸೆರೆ
  • whatsapp icon

ಕಾಸರಗೋಡು, ಮೇ 17: ಕಾರಡ್ಕ ಕೃಷಿ ಸಹಕಾರಿ ಸಂಘಕ್ಕೆ ಸುಮಾರು 4.67 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೇಕಲ ಮವ್ವಾಲ್ ನ ಅಹ್ಮದ್ ಬಶೀರ್, ನೆಲ್ಲಿಕಟ್ಟೆಯ ಅನಿಲ್ ಕುಮಾರ್ ಮತ್ತು ಅಂಬಲತ್ತರದ ಅಬ್ದುಲ್ ಗಫೂರ್ ಬಂಧಿತ ಆರೋಪಿಗಳು.

ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಸಹಕಾರಿ ಸಂಘದ ಕಾರ್ಯದರ್ಶಿ ರತೀಶ್ ನಿಗೆ ಕೋಟ್ಯಂತರ ರೂ. ವಂಚಿಸಲು ನೆರವಾದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ರತಿಶ್ ಪತ್ತೆಗಾಗಿ ತನಿಖಾ ತಂಡವು ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ತೆರಳಿ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News