ಚೆರ್ಕಳ: ಸಿಪಿಐಎಂ ವತಿಯಿಂದ ಫೆಲೆಸ್ತೀನ್ ಐಕ್ಯತಾ ಸದಸ್ ಉದ್ಘಾಟನೆ

Update: 2023-12-28 16:31 GMT

ಕಾಸರಗೋಡು : ಇತಿಹಾಸ ಕಂಡರಿಯದ ನರಹತ್ಯೆ ಫೆಲೆಸ್ತೀನ್ ನಲ್ಲಿ ನಡೆಯುತ್ತಿದೆ. ಇದು ಯುದ್ಧ ಅಲ್ಲ . ಸೈನ್ಯ ನಡೆಸು ತ್ತಿರುವ ಏಕಪಕ್ಷೀಯವಾದ ಹಿಂಸೆ ಎಂದು ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.

ಅವರು ಗುರುವಾರ ಕಾಸರಗೋಡು ನಗರದ ಹೊರವಲಯದ ಚೆರ್ಕಳ ದಲ್ಲಿ ಸಿಪಿಐ ಎಂ ಜಿಲ್ಲಾ ಸಮಿತಿ ಆಯೋಜಿಸಿದ ಫೆಲೆಸ್ತೀನ್ ಐಕ್ಯತಾ ಸದಸ್ ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಸ್ರೇಲ್ ನಡೆಸುತ್ತಿರುವ ಇಂತಹ ಹಿಂಸೆಗಳನ್ನು ಇಂದಿಗೂ ಕ್ಷಮಿಸಲಾಗದು. ಕದನ ವಿರಾಮಕ್ಕೆ ಇಸ್ರೇಲ್ ಮುಂದೆ ಬರಬೇಕು. ನರೇಂದ್ರ ಮೋದಿ ಇಸ್ರೇಲ್ ಪರವಾಗಿದ್ದಾರೆ. ಇದು ನಮ್ಮ ವಿದೇಶಿ ನೀತಿ ವಿರುದ್ಧವಾಗಿದೆ ಎಂದು ಯೆಚೂರಿ ಅಭಿಪ್ರಾಯಪಟ್ಟರು.

ಉದುಮ ಶಾಸಕ ಸಿ . ಎಚ್ ಕುಂಞ೦ಬು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ . ವಿ ಬಾಲಕೃಷ್ಣನ್ ಮಾಸ್ಟರ್, ರಾಜ್ಯ ಸಮಿತಿ ಸದಸ್ಯ ಕೆ ಪಿ ಸತೀಶ್ಚಂದ್ರನ್ , ವಿ .ಪಿ. ಪಿ ಮುಸ್ತಫಾ , ಸಿಪಿಐ ಮುಖಂಡ ಕೆ . ವಿ ಕೃಷ್ಣನ್ , ಮಾಜಿ ಸಂಸದ ಪಿ. ಕರುಣಾಕರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ , ಉಪಾಧ್ಯ ಕ್ಷ ಶಾನ್ ವಾಸ್ , ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಎನ್ . ಅಲಿ ಅಬ್ದುಲ್ಲಾ , ಹುಸೈನ್ ಮಡವೂರು, ಎಡಪಕ್ಷದ ಮುಖಂಡರಾದ ಕರೀಂ ಚಂದೇರ , ಹಮೀದ್ ಹಾಜಿ , ಅನಂತನ್ ನಂಬಿಯಾರ್, ಸನ್ನಿ ಅರಮನ ಮೊದಲಾದವರು ಮಾತನಾಡಿದರು.
















Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News