ಕಾಸರಗೋಡು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್

Update: 2024-03-08 16:43 GMT

ಕಾಸರಗೋಡು : ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರನ್ನು ಮತ್ತೆ ಕಣಕ್ಕಿಸಲಾಗಿದೆ.

ಇದರಿಂದ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ತ್ರಿಕೋನ ಸ್ಪರ್ಧೆಗೆ ಕಾಸರಗೋಡು ಲೋಕಸಭಾ ಕ್ಷೇತ್ರ ಸಜ್ಜಾಗಿದೆ. ಈ ಬಾರಿ ಚುನಾವಣಾ ದಿನಾಂಕ ಘೋಷಣೆ ಮೊದಲೇ ಅಭ್ಯರ್ಥಿಗಳ ನ್ನು ಘೋಷಿಸಲಾಗಿದೆ. ಸಿಪಿಐಎಂ ನಿಂದ ಎಂ. ವಿ ಬಾಲಕೃಷ್ಣನ್ ಮಾಸ್ಟರ್, ಬಿಜೆಪಿಯಿಂದ ಅಶ್ವಿನಿ ಎಂ.ಎಲ್ ರವರನ್ನು ಕಣಕ್ಕಿಳಿಸಲಾಗಿದೆ. ಎರಡೂ ಪಕ್ಷಗಳು ಮೊದಲ ಸುತ್ತಿನ ಪ್ರಚಾರಕ್ಕೆ ದುಮುಕಿದ್ದಾರೆ.

ಕಾಂಗ್ರೆಸ್ ಮತ್ತು ಸಿಪಿಐಎಂ ನಡುವೆ ನೇರ ಸ್ಪರ್ಧೆಗೆ ಕಾರಣವಾಗುತ್ತಿರುವ ಕ್ಷೇತ್ರದಲ್ಲಿ ಬಿಜೆಪಿಯೂ ಸಡ್ಡು ನೀಡಲು ಮುಂದಾಗಿದೆ. 35 ವರ್ಷಗಳ ಬಳಿಕ 2019 ರಲ್ಲಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.

ರಾಜ್ ಮೋಹನ್ ಉಣ್ಣಿತ್ತಾನ್ 44 ಸಾವಿರ ಮತಗಳ ಅಂತರದಿಂದ ಸಿಪಿಐಎಂ ನ ಕೆ. ಪಿ ಸತೀಶ್ಚಂದ್ರನ್ ವಿರುದ್ಧ ಗೆಲುವು ಸಾಧಿಸಿದ್ದರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News