ಕಾಸರಗೋಡು: ಚಲಿಸುತ್ತಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆ

Update: 2024-05-23 12:44 GMT

ಕಾಸರಗೋಡು: ಚಲಿಸುತ್ತಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆಉಂಟಾದ ಘಟನೆ ಕಾಞ೦ಗಾಡ್ ಸಮೀಪದ ಚಿತ್ತಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದ್ದು, ಗಂಟೆಗಳ ಬಳಿಕ ಸೋರಿಕೆ ತಡೆಗಟ್ಟಲಾಗಿದೆ.

ಸುತ್ತಲಿನ ಸುಮಾರು 500 ಮೀಟರ್ ನಷ್ಟು ದೂರದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಈ ದಾರಿಯಾಗಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆ 7.30ರ ಸುಮಾರಿಗೆ ಸೋರಿಕೆ ಕಂಡು ಬಂದಿದ್ದು , ಕೂಡಲೇ ಚಾಲಕ ಟ್ಯಾಂಕರ್ ನಿಲುಗಡೆಗೊಳಿಸಿ ಕಂಪೆನಿ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಹತ್ತು ಗಂಟೆ ಸುಮಾರಿಗೆ ಸೋರಿಕೆ ತಡೆಗಟ್ಟಲಾಯಿತು. ಇದರಿಂದ ನಿಟ್ಟಿಸಿರು ಬಿಡುವಂತಾಯಿತು. ಸೋರಿಕೆ ಕಂಡು ಬಂದ ಕೂಡಲೇ ಟ್ಯಾಂಕರನ್ನು ಚಾಲಕ ರಸ್ತೆ ಬದಿ ನಿಲುಗಡೆಗೊಳಿಸಿದ್ದರಿಂದ ಭಾರೀ ದುರಂತ ತಪ್ಪಿದೆ.

ಸೋರಿಕೆಯಾದ ಟ್ಯಾಂಕರ್ ನಲ್ಲಿರುವ ಅನಿಲವನ್ನು ಮೂರು ಟ್ಯಾಂಕರ್ ಗಳಿಗೆ ವರ್ಗಾಹಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾತ್ರಿ ವೇಳೆಗಷ್ಟೇ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಕಾಞ೦ಗಾಡ್, ಕಾಸರಗೋಡು ಮೊದಲಾದೆಗಳಿಂದ ಮೂರು ಘಟಕ ಅಗ್ನಿಶಾಮಕ ದಳದ ಸಿಬ್ಬಂದಿ ಸೋರಿಕೆ ತಡೆಗಟ್ಟಲು ಹರಸಾಹಸಪಟ್ಟಿತು. ಮಂಗಳೂರಿನಿಂದ ಅಧಿಕಾರಿಗಳ ತಂಡವು ಸ್ಥಳಕ್ಕೆ ಆಗಮಿಸಿದ್ದು, ಅಗತ್ಯ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News