ಸಿರಿಬಾಗಿಲು ಪ್ರತಿಷ್ಠಾನ : ದೇಶ ಮಂಗಲ ದಿ|ಕೃಷ್ಣ ಕಾರಂತರ ಜನ್ಮ ದಿನಾಚರಣೆ

Update: 2024-10-22 05:35 GMT

ಕಾಸರಗೋಡು:  ಹಿರಿಯ ವಿದ್ವಾಂಸ ಯಕ್ಷಗಾನ ಅರ್ಥದಾರಿ ದೇಶಮಂಗಲ ದಿ|ಕೃಷ್ಣ ಕಾರಂತರ ಜನ್ಮದಿನಾಚರಣೆ, ಸಂಸ್ಮರಣಾ ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ  ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

ಬೆಳಿಗ್ಗೆ 10:00 ಕ್ಕೆ  ಹರಿಕಥಾ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು  ನಾರಾಯಣ ರಂಗಾಭಟ್ಟ ಮಧೂರು ಜ್ಯೋತಿಷ್ಯರು ಉದ್ಘಾಟಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ದೇಶಮಂಗಲ ಕೃಷ್ಣ ಕಾರಂತರ  ಸಂಸ್ಕರಣಾ ಭಾಷಣ ಮಾಡಿದರು. ರಾಜಾರಾಮ ರಾವ್ ಮೀಯಪದವುರವರು ಗೌರವಾರಪಣೆ ಸ್ವೀಕರಿಸಿದ ಡಾ. ರಮಾನಂದ ಬನಾರಿಯವರ ಕುರಿತು ಅಭಿನಂದನಾ ಭಾಷಣ ಮಾಡಿದರು. ಎಡನೀರು ಮಠಾಧೀಶರಾದ ಸಚ್ಚಿದಾನಂದ ಭಾರತಿ ಅವರು ಆಶೀರ್ವಚನ ನಡೆಸಿದರು. ಗೌರವಾರ್ಪಣೆ ಸ್ವೀಕರಿಸಿದ ಡಾ| ಬನಾರಿ ಅವರು ಕಾರ್ಯಕ್ರಮಕ್ಕೆಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ  ಸುಜೀರ್ ಸುಬ್ರಾಯ ಸುರತ್ಕಲ್ ಇವರು ದಕ್ಷಿಣ ಕನ್ನಡ ಯಕ್ಷಗಾನ ಕಲಾ ವೃಂದ (ಕೋಲಾರ)  ಇವರು ಉಪಯೋಗಿಸುತ್ತಿದ್ದ ಇನ್ನೂರು ವರುಷಗಳ ಹಿಂದಿನ ತೆಂಕುತಿಟ್ಟು ಯಕ್ಷಗಾನದ ಎರಡು ಕಿರೀಟಗಳನ್ನು ಪ್ರತಿಷ್ಠಾನದ ಮ್ಯೂಸಿಯಂಗೆ ಹಸ್ತಾಂತರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನಿವೃತ್ತ ಮುಖ್ಯೋಪಾಧ್ಯಾಯರಾದ  ಕೃಷ್ಣ ಶರ್ಮ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಫಣಿಗಿರಿ ಪ್ರತಿಷ್ಠಾನ, ಬೈಂದೂರು ಇದರ ಅಧ್ಯಕ್ಷ  ಉಮೇಶ ಶಿರೂರು ಅವರು ಭಾಗವಹಿಸಿದ್ದರು. ‌ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪ್ರೊ. ಶ್ರೀನಾಥ್ ಕಾಸರಗೋಡು,  ವಾಸುದೇವ ಕಾರಂತ ಉಜಿರೆಕೆರೆ ಮುಂತಾದವರು ಉಪಸ್ಥಿತರಿದ್ದರು.

ಗಣಿತ, ವಿಜ್ಞಾನ ದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ. ಯಚ್. ಡಿ. ಪದವಿ ಪಡೆದ ಶುಭಲಕ್ಷ್ಮಿ ಮಹೇಶ ಮಯ್ಯ ಇವರನ್ನು ಅಭಿನಂದಿಸಲಾಯಿತು.  ಪ್ರಸನ್ನ ಕಾರಂತ ದೇಶಮಂಗಲ ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಕೆ. ಕೂಡ್ಲು ಅವರು ಧನ್ಯವಾದವಿತ್ತರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಡಗುತ್ತಿಟ್ಟಿನ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಮಯ್ಯ ಹಾಲಾಡಿ ಹಿಮ್ಮೇಳದಲ್ಲಿ ಚೈತನ್ಯ ಕೃಷ್ಣ ಪದ್ಯಾಣ,ಶಶಿ ಆಚಾರ್ಯ ಭಾಗವಹಿಸಿದರು. ಭೀಷ್ಮನಾಗಿ ಉಜಿರೆ ಅಶೋಕ್ ಭಟ್, ಸಾಲ್ವ ನಾಗಿ ರಾಧಾಕೃಷ್ಣ ಕಲ್ಚಾರ್ ,ಅಂಬೆಯ ಪಾತ್ರದಲ್ಲಿ ಜಯಪ್ರಕಾಶ್ ಶೆಟ್ಟಿ ಪರಶುರಾಮನಾಗಿ ಸರ್ಪಂಗಳ ಈಶ್ವರ ಭಟ್ ವೃದ್ದ ಬ್ರಾಹ್ಮಣನಾಗಿ ವೈಕುಂಠ ಹೇರ್ಳೆ ಸಹಕರಿಸಿದರು.


Delete Edit



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News