ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಮ್ಯೂಸಿಯಂ ಗೆ ಭೇಟಿ ನೀಡಿದ ಎಂ.ಪಿ ಇಂಟರ್‌ ನ್ಯಾಷನಲ್‌ ಸ್ಕೂಲ್‌ ನ ವಿದ್ಯಾರ್ಥಿಗಳು

Update: 2024-07-30 08:47 GMT

ಕಾಸರಗೋಡು: ಸಿರಿಬಾಗಿಲು ಪೆರಿಯಡ್ಕ ಎಂ ಪಿ ಇಂಟರ್‌ ನ್ಯಾಷನಲ್‌ ಸ್ಕೂಲ್‌ ನ ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಡಾ. ಅಬ್ದುಲ್ ಜಲೀಲ್ ರವರ ನಿರ್ದೇಶನದಂತೆ ತಮ್ಮ ಪಠ್ಯದ ಅಧ್ಯಯನದ ವಿಚಾರಕ್ಕೆ ಸಂಬಂಧಿಸಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಮ್ಯೂಸಿಯಂ ಗೆ ಭೇಟಿ ನೀಡಿದರು.

ಅಧ್ಯಾಪಕರಾದ ಸಫ್ವಾನ್.‌ ಪಿ, ಎಂ.ಎಸ್ ಸುಜನ್ ಪಾಲ್ ರವರು ನೇತೃತ್ವ ವಹಿಸಿದರು. ಯಕ್ಷಗಾನದ ಎಲ್ಲಾ ಮಾದರಿ ಗಳನ್ನು, ಕೀರ್ತಿಷೇಶ ಕಲಾವಿದರ ಭಾವಚಿತ್ರ, ಇನ್ನಿತರ ವಿವರಗಳನ್ನು ನೋಡಿ, ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಅದ್ಯಕ್ಷರು ,ಸದಸ್ಯರು ಯಕ್ಷಗಾನದ,ವೇಷಭೂಷಣದ ವೈಶಿಷ್ಟ್ಯಗಳನ್ನು ವಿವರಿಸಿದರು.

ಈ ಭೇಟಿ ಶಿಕ್ಷಣ ಸಚಿವಾಲಯದ ಸಿಬಿಎಸ್ ಇ ಶಿಕ್ಷಾ ಸಪ್ತಾಹದ ಆಚರಣೆಯ ನಿಮಿತ್ತ ಏರ್ಪಡಿಸಲಾಗಿತ್ತು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News