ಕುಶಾಲನಗರ | ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು
Update: 2025-03-13 16:09 IST

ಕುಶಾಲನಗರ : ವಿದ್ಯುತ್ ಸ್ಪರ್ಶದಿಂದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ಗ್ರಾಮದ ಕಾಫಿ ತೋಟವೊಂದರಲ್ಲಿ ಬುಧವಾರ ನಡೆದಿದೆ.
ಸುಮಾರು 36 ವರ್ಷದ ಗಂಡಾನೆ ಮೂರು ದಿನಗಳ ಹಿಂದೆಯೇ ಮೃತಪಟ್ಟಿರುವ ಕುರಿತು ಶಂಕಿಸಲಾಗಿದೆ. ಸೋಲಾರ್ ಬೇಲಿ ದಾಟುವ ಸಂದರ್ಭ ವಿದ್ಯುತ್ ಸ್ಪರ್ಶಗೊಡಿರಬಹುದುದೆಂದು ಸಂಶಯ ವ್ಯಕ್ತವಾಗಿದೆ. ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.
ಸ್ಥಳಕ್ಕೆ ಎಸಿಎಫ್ ಗೋಪಾಲ್, ಆರ್‌ಎಫ್ ಓ ರತನ್ ಕುಮಾರ್, ಡಿಆರ್‌ಎಫ್ ಓ ಸುಬ್ರಾಯ, ವನ್ಯಜೀವಿ ವೈದ್ಯರಾದ ಚಿಟ್ಟಿಯಪ್ಪ, ಸಿಂಧೆ, ಚೆಸ್ಕಾಂ ಇಲಾಖೆ ಅಧಿಕಾರಿ ಮಂಜುನಾಥ್ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸಿದರು.