ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ, ಸಿಪಿಐ(ಎಂ) ನಾಯಕ ಜಿ.ಸಿ.ಬಯ್ಯಾರೆಡ್ಡಿ ಅಂತ್ಯಕ್ರಿಯೆ

Update: 2025-01-05 07:38 GMT

ಕೋಲಾರ : ಹಿರಿಯ ಕಮ್ಯುನಿಸ್ಟ್ ಪಕ್ಷದ ಮುಖಂಡ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರ ಅಂತಿಮ ಸಂಸ್ಕಾರ ಅವರ ತವರು ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕಿನ ಗಡಿಗವಾರಪಲ್ಲಿಯಲ್ಲಿ ಸಾವಿರಾರು ಜನಸ್ತೋಮದ ನಡುವೆ ಅತ್ಯಂತ ಸರಳವಾಗಿ ನೆರವೇರಿಸಲಾಯಿತು.

ಗಡಿಗವಾರಪಲ್ಲಿಯ ಅವರ ತೋಟದಲ್ಲಿ ಕಾಮ್ರೇಡ್ ಬಯ್ಯಾರೆಡ್ಡಿ ಅವರಿಗೆ ʼಲಾಲ್ ಸಲಾಂʼ ಎಂದು ಘೋಷಣೆ ಹಾಕುವ ಮೂಲಕ ಮೆರವಣಿಗೆಯಲ್ಲಿ ಸಾಗಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಅಂತಿಮ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಮ್ಯುನಿಸ್ಟ್ ಪಕ್ಷದ ಪ್ರಮುಖರು, ರಾಷ್ಟ್ರೀಯ ನಾಯಕರು, ಪ್ರಾಂತ ರೈತ ಸಂಘದ ಕಾರ್ಯಕರ್ತರು, ಜನಪರ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು, ಮತ್ತು ಅಪಾರ ಅಭಿಮಾನಿಗಳು ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಸಿಪಿಎಂ ಪಕ್ಷದ ರಾಷ್ಟ್ರೀಯ ಪಾಲಿಟ್ ಬ್ಯುರೋ ಸದಸ್ಯರಾದ ಬಿ.ವಿ.ರಾಘವಲು, ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜುಕೃಷ್ಣನ್, ಸಿ.ಐಐ.ಟಿ.ಯು. ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಎಂ.ಪಿ.ಮುನಿವೆಂಕಟಪ್ಪ, ರಾಜ್ಯ ಕಾರ್ಯದರ್ಶಿ ಪ್ರಕಾಶ್, ಹಿರಿಯ ಮುಖಂಡರಾದ ಜಿ.ಎನ್.ನಾಗರಾಜ್, ವರಲಕ್ಷ್ಮಿ, ವಿಮಲ, ಕೆ.ನೀಲಾ, ಗೌರಮ್ಮ, ಯು.ಬಸವರಾಜ್, ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ.ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News