ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ, ಅವರ ಹೇಳಿಕೆ ಅವರಿಗೆ ಸೀಮಿತ : ಬಿ.ಸಿ.ಪಾಟೀಲ್‌

Update: 2024-11-29 18:23 IST
ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ, ಅವರ ಹೇಳಿಕೆ ಅವರಿಗೆ ಸೀಮಿತ : ಬಿ.ಸಿ.ಪಾಟೀಲ್‌
  • whatsapp icon

ಕೋಲಾರ : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕಾರಣ ಜೋರಾಗಿದ್ದು, ವಕ್ಫ್‌ ವಿರುದ್ಧ ಹೋರಾಟವನ್ನು ಮುಂದುವರಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣಕ್ಕೆ ವಿಜಯೇಂದ್ರ ಗುಂಪು ಸಡ್ಡು ಹೊಡೆದಿದೆ.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗಣೇಶನಿಗೆ ಬಿಜೆಪಿ ‌ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾದ ಬಣ ಶುಕ್ರವಾರ ವಿಶೇಷ ‌ಪೂಜೆ ಸಲ್ಲಿಸುವ ಮೂಲಕ ತನ್ನ ಪ್ರವಾಸ ಆರಂಭಿಸಿತು. 

ಕುರುಡುಮಲೆ ದೇಗುಲಕ್ಕೆ ರೇಣುಕಾಚಾರ್ಯ, ಬಿ.ಸಿ‌ಪಾಟೀಲ್, ಕಟ್ಟಾ ಸುಬ್ರಮಣ್ಯ ನಾಯ್ಡು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕ ಬಿ.ಸಿ ಪಾಟೀಲ್‌, "ನಮ್ಮಲ್ಲಿ ಪಕ್ಷದೊಳಗೇ ಇದ್ದು, ಚೂರಿ ಹಾಕುವವರು ಇದ್ದಾರೆ. ಬಿಜೆಪಿ ಶಾಲು ಹಾಕಿಕೊಂಡು, ಪಕ್ಷದ ಅಧ್ಯಕ್ಷರ ವಿರುದ್ಧವೇ ಮಾತನಾಡುತ್ತಾರೆ. ಬಿಜೆಪಿ ಹೈಕಮಾಂಡ್ ಸುಮ್ಮನಿಲ್ಲ, ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಉಪಚುನಾವಣೆ ಸೋಲಿಗೆ ವಿಜಯೇಂದ್ರ ಹೊಣೆ ಎಂದು ಹೇಳುತ್ತಿದ್ದಾರೆ. ಆದರೆ ಈ ರೀತಿ ಹೇಳುವುದು ಸರಿಯಲ್ಲ. ಸದ್ಯ ಯತ್ನಾಳ್ ಹುಚ್ಚರಂತೆ ಮಾತನಾಡುತ್ತಿದ್ದಾರೆ, ಅವರು ನೀಡುವ ಹೇಳಿಕೆ ಅವರಿಗೆ ಸೀಮಿತ" ಎಂದು ವಾಗ್ದಾಳಿ ನಡೆಸಿದರು.

 ಕಾಂಗ್ರೆಸ್ ಮುಖವಾಣಿಯಂತೆ ಯತ್ನಾಳ್ ಕೆಲಸ :

ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮಾತನಾಡಿ, "ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ. ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು. ಕಾಂಗ್ರೆಸ್ ಮುಖವಾಣಿಯಂತೆ ಯತ್ನಾಳ್ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡವರಂತೆ ಕೆಲಸ ಮಾಡುತ್ತಿದ್ದಾರೆ" ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News