ಬಿಜೆಪಿಗೆ ಹೋಗಿದ್ದರಿಂದ ಅಣ್ಣಾಮಲೈಗೆ ಮೋಸವಾಗಿದೆ: ಸಚಿವ ತಂಗಡಗಿ

Update: 2025-04-05 14:20 IST
ಬಿಜೆಪಿಗೆ ಹೋಗಿದ್ದರಿಂದ ಅಣ್ಣಾಮಲೈಗೆ ಮೋಸವಾಗಿದೆ: ಸಚಿವ ತಂಗಡಗಿ
  • whatsapp icon

ಕೊಪ್ಪಳ: ಬಿಜೆಪಿಗೆ ಹೋಗಿದ್ದರಿಂದ ಅಣ್ಣಾಮಲೈಗೆ ಮೋಸವಾಗಿದೆ ಎಂದು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣಾಮಲೈ ಉತ್ತಮ ಅಧಿಕಾರಿಯಾಗಿ ನೆಮ್ಮದಿಯಿಂದ ಕೆಲಸ ಮಾಡುತಿದ್ದರು ಬಿಜೆಪಿಗೆ ಹೋಗಿದ್ದರಿಂದ ಅವರ ಪರಿಸ್ಥಿತಿ ಏನಾಗಿದೆ? ರೋಡಲ್ಲಿ ನಿಂತು ಬಾರ್ಕೋಲಲ್ಲಿ ತಮ್ಮ ಮೈ, ಮುಖಕ್ಕೆ ಹೊಡೆದುಕೊಳ್ಳುವ ಪರಿಸ್ಥಿತಿಗೆ ಬಂದಿದೆ ಎಂದರು.

ಬಿಜೆಪಿಯವರು ಸಾಧ್ಯವಾದಷ್ಟು ಜನರಿಗೆ ಮೋಸಮಾಡಲು ಪ್ರಯತ್ನ ಪಡುತ್ತಿದ್ದಾರೆ. ಅವರು ಹೇಳಿದ 15 ಲಕ್ಷ ಕೊಟ್ಟಿದ್ದಾರಾ?  2‌ ಕೋಟಿ ಉದ್ಯೋಗ ಕೊಡುತ್ತೇನೆ ಎಂದಿದ್ದರು ಅದನ್ನೂ ಕೊಟ್ಟಿಲ್ಲ.‌ ಕಪ್ಪು ಹಣ ತರುತ್ತೇವೆ ಎಂದಿದ್ದರು ಅದನ್ನು ತಂದಿದ್ದಾರಾ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ರಾಜಕೀಯವಾಗಿ ಯಾರ ಅವಶ್ಯಕತೆ ಇದೆಯೋ ಅವರನ್ನು ಉಪಯೋಗಿಸಿಕೊಂಡು ಬಿಸಾಡುತ್ತಾರೆ. ಉದಾಹರಣೆಗೆ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾಗ ನನ್ನನ್ನು ಕರೆದುಕೊಂಡು ಹೋಗಿ ಮುಖ್ಯಮತ್ರಿ ಸ್ಥಾನ ಬಿಟ್ಟು ಉಳಿದ ಎಲ್ಲಾ ಇಲಾಖೆ ಕೊಡುತ್ತೇವೆ ಎಂದು ಹೇಳಿದ್ದರು. ಬಹುಮತ ಸಾಬೀತಾದ ನಂತರ ಒಳ್ಳೆಯ ಖಾತೆಗಳನ್ನು ತಾವು ತೆಗೆದು ಕೊಂಡು ಉಳಿದ ಖಾತೆ ನಮಗೆ ಕೊಟ್ಟರು ಎಂದು ಹೇಳಿದರು.

ಬಿಜೆಪಿಯವರು ರಾಜಕೀಯವಾಗಿ ಅಮಾಯಕರ ಜೊತೆ, ಜನಸಾಮಾನ್ಯರ ಜೊತೆ ಆಟವಾಡುತ್ತಾರೆ, ಅವರಿಗೆ ಬಡವರು ದೊಡ್ಡವರಾಗಬಾರದು, ತಮ್ಮ ಮಕ್ಕಳು ಮಾತ್ರ ಉದ್ಧಾರವಾಗಬೇಕು ಎಂದು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News