ಕೊಪ್ಪಳ | ಲಾರಿ-ಬೈಕ್ ನಡುವೆ ಅಪಘಾತ : ಸ್ಥಳದಲ್ಲಿಯೇ ಇಬ್ಬರು ಮೃತ್ಯು

Update: 2024-09-01 15:11 GMT

ಕೊಪ್ಪಳ : ಬೈಕ್‌ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸಾವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಮೃತ ಸವಾರರನ್ನು ಕೊಪ್ಪಳ ತಾಲೂಕಿನ ವಣಗೇರಿ ಗ್ರಾಮದ ಪರಶುರಾಮ (40), ಹನುಮಂತ (35)  ಎಂದು ಗುರುತಿಸಲಾಗಿದೆ.

ಬೈಕ್ ಸವಾರರು ಇಳಕಲ್‌ಗೆ ಹೋಗುವಾಗ ಈ ಘಟನೆ ಸಂಭವಿಸಿದ್ದು, ಸ್ಥಳದಿಂದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News