ಕೊಪ್ಪಳ | ಅಪಘಾತ ತಡೆಯಲು ಪೊಲೀಸರಿಂದ ಬ್ಯಾರಿಕೇಡ್‌ ಅಳವಡಿಕೆ

Update: 2024-12-24 07:23 GMT

ಕೊಪ್ಪಳ : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅದನ್ನು ತಡೆಯಲು ನಗರದ ಮುಖ್ಯ ರಸ್ತೆಗಳಲ್ಲಿ ಪೋಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆ ಆಗುತಿದ್ದು, ಅಪಘಾತಗಳು ಕೂಡ ಹೆಚ್ಚುತ್ತಿವೆ. ಇದಕ್ಕೆ ವೇಗವಾಗಿ ವಾಹನ ಚಲಾಯಿಸುವುದೇ ಮುಖ್ಯ ಕಾರಣ. ಇದನ್ನು ತಡೆಯಲು ಕೊಪ್ಪಳ ಜಿಲ್ಲಾ ಪೋಲೀಸರು ಬ್ಯಾರಿಕೇಡ್‌ ಅಳವಡಿಕೆಗೆ ಮುಂದಾಗಿದ್ದಾರೆ.

ಅಲ್ಲದೆ, ಕೆಲವು ಆಟೋಗಳು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದು ಕೂಡ ಸಂಚಾರ ದಟ್ಟಣೆ ಹೆಚ್ಚಾಗಲು ಕಾರಣ, ಪೊಲೀಸ್ ಇಲಾಖೆಯು ಅವರ ವಿರುದ್ಧ ಮೃಧು ಧೋರಣೆ ಬಿಟ್ಟು ಕಠಿಣ ಕ್ರಮ ತೆಗೆದು ಕೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News