ಸಿದ್ದರಾಮಯ್ಯ ಆಡಳಿತದಲ್ಲಿ ಜನರು ನೆಮ್ಮದಿಯಿಂದ ಇದ್ದಾರೆ : ಶಿವರಾಜ ತಂಗಡಗಿ
ಕೊಪ್ಪಳ : ಸಿ.ಟಿ.ರವಿ ಅವರ ನಕಲಿ ಎನ್‌ಕೌಂಟರ್‌ಗೆ ತಯಾರಿ ನಡೆದಿತ್ತು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಜ ತಂಗಡಗಿ, "ಕೇಂದ್ರ ಸಚಿವರು, ಹಿರಿಯ ನಾಯಕರಾಗಿ ಈ ರೀತಿ ಮಾತಾನಾಡುವುದು ನಾಚಿಕೆಗೇಡು" ಎಂದು ಹೇಳಿದರು.
ಸೋಮವಾರ ಕನಕಗಿರಿಯಲ್ಲಿ ಮಾತನಾಡಿದ ಅವರು, "ಕೇಂದ್ರದ ಮಂತ್ರಿಯಾದ ಪ್ರಹ್ಲಾದ್ ಜೋಶಿ ಕರ್ನಾಟಕದಲ್ಲಿ ಇದ್ದಾರೋ ಅಥವಾ ಗುಜರಾತ್‌ನಲ್ಲಿ ಇದ್ದಾರೋ. ಗುಜರಾತ್‌ನಲ್ಲಿ ಎನ್‌ಕೌಂಟರ್ ಆಗಬಹುದು. ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ಜನರು ನೆಮ್ಮದಿಯಿಂದ ಇದ್ದಾರೆ, ರಾಜ್ಯದಲ್ಲಿ ಎನ್‌ಕೌಂಟರ್ ಅಥವಾ ಕೋಮು ಗಲಭೆಗಳಿಗೆ ಕಾಂಗ್ರೆಸ್ ಸರಕಾರ ಅವಕಾಶ ಕೊಡುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಅಸಂವಿಧಾನಿಕ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಸಿಟಿ ರವಿ ಅವರ ಮೇಲೆ ಕೇಸ್ ಆಗಿದೆ, ಪೊಲೀಸರು ಅವರ ಕೆಲಸ ಮಾಡಿದ್ದಾರೆ, ಭದ್ರತೆ ದೃಷ್ಟಿಯಿಂದ ಅವರನ್ನು ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಇಷ್ಟಕ್ಕೆ ನಕಲಿ ಎನ್‌ಕೌಂಟರ್ ಮಾಡೋಕೆ ಸಾಧ್ಯವೇ..? ಎಂದು ಪ್ರಶ್ನಿಸಿದರು.