ಕೊಪ್ಪಳ | ಅದ್ಧೂರಿಯಾಗಿ ನಡೆದ ಗವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ : ಎಂಟು ಲಕ್ಷಕ್ಕೂ ಹೆಚ್ಚು ಜನರು ಭಾಗಿ
ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿ ಪಡೆದ ಗವಿಮಠದ ಗವಿಸಿದ್ದೇಶ್ವರರ ಮಹಾರಥೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ಗೋಧೂಳಿ ಸಮಯಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿತು.
ಗವಿಮಠದ ಗದ್ದುಗೆಯಲ್ಲಿದ್ದ ಗವಿಸಿದ್ದೇಶ್ವರ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಅಭಿನವ ಗವಿಶ್ರೀಗಳ ನೇತೃತ್ವದಲ್ಲಿ ಕಂಸಾಳೆ, ವಾದ್ಯ, ನಂದಿಕೋಲು ನೃತ್ಯದ ಮೆರವಣಿಗೆಯೊಂದಿಗೆ ರಥದೊಳಗೆ ಕೂರಿಸಲಾಯಿತು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದರು.
ಈ ಜಾತ್ರಾ ಮಹೋತ್ಸವದ ಉದ್ಘಾಟಕರಾಗಿ ಆಗಮಿಸಿದ್ದ ದಾರವಾಡದ ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಪದ್ಮಶ್ರೀ ಎಮ್ ವೆಂಕಟೇಶ ಕುಮಾರ್ ಮಾತನಾಡಿ, ನಾನು ಕೊಪ್ಪಳದ ಜಾತ್ರೆಯ ಬಗ್ಗೆ ಕೇಳಿದ್ದೆ ಆದರೆ ಎಂದೂ ನೋಡಿರಲಿಲ್ಲ, ಆದರೆ ಇಂದು ನೋಡಿದೆ. ಇಂತಹ ಜಾತ್ರೆಯನ್ನು ಜೀವನದಲ್ಲಿ ಎಂದು ಕೂಡ ನೋಡಿರಲಿಲ್ಲ ಎಂದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ತುಮಕೂರಿನ ಸಿದ್ದಗಂಗಾಶ್ರೀ ಮಾತನಾಡಿ, ಗವಿಶ್ರೀಗಳು ವಿಧ್ಯಾರ್ಥಿಗಳನ್ನು ವಿದ್ಯಾರ್ಥಿ ದೆವೋ ಭವ ಎಂದು ಭಾವಿಸಿ ಅವರಿಗೆ ಶಿಕ್ಷಣ ನೀಡುತ್ತಿರುವುದು ಸಂತೋಷದಾಯಕ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕರಿಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಹೇಮಾಲತ ನಾಯಕ, ಬಸವನಗೌಡ ಬಾದರ್ಲಿ, ಜೆಡಿಎಸ್ ಮುಖಂಡ ಸಿ.ವಿ ಚಂದ್ರಶೇಖರ್, ಮಾಜಿ ಸಚಿವ ಹಾಲಪ್ಪ ಆಚಾರ ಸೇರದಂತೆ ಇತರರು ಇದ್ದರು.
ಎಲ್ಲ ಜಾತಿಯವರು ಭಾವೈಕ್ಯತೆಯಿಂದ ತಮ್ಮ ತಮ್ಮ ಹೊಲಗಳಲ್ಲಿ ಬೆಳೆದ ದವಸ ಧಾನ್ಯಗಳನ್ನು ತರುತ್ತಾರೆ. ಅಲ್ಲದೇ ರಥೋತ್ಸವಕ್ಕೂ ಕೂಡಾ ಎಲ್ಲ ಜಾತಿಯವರೂ ಒಂದಾಗಿ ಸೇರಿ ಸಂಭ್ರಮಾಚರಣೆ ಮಾಡುತ್ತಾರೆ. ಗವಿಮಠದ ಶ್ರೀಗಳು ಅನ್ನ, ಅಕ್ಷರ, ದಾಸೋಹವನ್ನು ಜಾತಿ ತಾರತಮ್ಯ ಮರೆತು ಸರ್ವ ಜನಾಂಗದವರಿಗೆ ಸಮಾನ ರೀತಿಯಲ್ಲಿ ನೋಡುವ ಮುಖಾಂತರ ಸಮಾಜ ಕಟ್ಟುವ ಕೆಲಸ ಮಾಡುತ್ತಾರೆ.
-ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತಾವರಿ ಸಚಿವರು ಕೊಪ್ಪಳ
ಜಾತ್ರೆಗಳೂ ಆಡಂಭರಕ್ಕೆ ಸೀಮಿತವಾಗದೆ ಸಮಾಜಗಳ ಬದಲಾವಣೆಗೆ ಕೊಪ್ಪಳ ಅಜ್ಜನ ಜಾತ್ರೆ ಹೆಸರಾಗಿದೆ ಅಂದ ಮಕ್ಕಳಿಗೆ ವಸತಿ ಶಾಲೆಗಳು ಇನ್ನೂ ಇನ್ನಿತರ ಸೌಲಭ್ಯಗಳು ಗವಿ ಮಠಕ್ಕೆ ದೊರಕಲಿ ರೈತರಿಗೆ ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗಿ ನೆಮ್ಮದಿಯಿಂದ ಜೀವನ ಸಾಗಿಸಲು ಗವಿ ಸಿದ್ದೇಶ್ವರಲ್ಲಿ ಪ್ರಾಥನೆಮಾಡುತ್ತೇನೆ.
-ಬಿ.ವೈ.ವಿಜಯೇಂದ್ರ, ರಾಜ್ಯಧ್ಯಕ್ಷರು ಭಾರತೀಯ ಜನಾತ ಪಾರ್ಟಿ ಕರ್ನಾಟಕ
ಗವಿ ಸಿದ್ದೇಶ್ವರ ಜಾತ್ರೆ ಜಾತ್ರೆಯಲ್ಲ, ಅರಿವು ಮೂಡಿಸುವ ಜನ ಜಾತ್ರೆಯಾಗಿದೆ. ಗವಿ ಮಠ ನೊಂದ ಬಾಳಿಗೆ ಬೇಳಕಾಗಿದೆ ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳು ಜಾತಿಯನ್ನು ಮರೆದು ವಿಧ್ಯಾಭ್ಯಾಸ ಮಾಡುತ್ತಾರೆ.
-ರಾಜಶೇಖರ ಹಿಟ್ನಾಳ, ಸಂಸದರು ಕೊಪ್ಪಳ