ಕೊಪ್ಪಳ | ಪಿಡಿಓ ಮೇಲೆ ಗ್ರಾಮ ಪಂಚಾಯತ್‌ ಸದಸ್ಯೆ, ಪುತ್ರನಿಂದ ಹಲ್ಲೆ

Update: 2025-02-28 11:11 IST
ಕೊಪ್ಪಳ | ಪಿಡಿಓ ಮೇಲೆ ಗ್ರಾಮ ಪಂಚಾಯತ್‌ ಸದಸ್ಯೆ, ಪುತ್ರನಿಂದ ಹಲ್ಲೆ
  • whatsapp icon

ಕೊಪ್ಪಳ\ಯಲಬುರ್ಗಾ : ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತ್‌ ಪಿಡಿಒ ನೇತೃತ್ವದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಮನೆಗಳ ಹಂಚಿಕೆಗಾಗಿ ಫಲಾನುಭವಿಗಳ ಕುರಿತ ಸಭೆಯಲ್ಲಿ ಪಿಡಿಓ ಮೇಲೆ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಅವರ ಪುತ್ರ ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿದೆ.

ಸ್ಥಳೀಯರೊಬ್ಬರಿಗೆ ನಿವೇಶನದ ಉತಾರ ನೀಡದಂತೆ ಕಳೆದ ಒಂದು ವರ್ಷದಿಂದ ಸದಸ್ಯೆ ಶಾಂತಮ್ಮ ಹಾಗೂ ಪುತ್ರ ಭೀಮೇಶ ಅವರು ಪಿಡಿಓ ರತ್ನಮ್ಮ ಗುಂಡಣ್ಣನವರಗೆ ತಾಕೀತು ಮಾಡಿದ್ದರು, ಆದರೆ ಪಿಡಿಒ ಅವರು ನಿವೇಶನದ ಮೂಲ ಮಾಲಕರಿಗೆ ಕಾನೂನಾತ್ಮಕವಾಗಿ ಆಸ್ತಿಯ ಉತಾರ ನೀಡಿದ್ದರು. ಇದನ್ನು ವಿರೋಧಿಸಿ ಗ್ರಾಪಂ ಸದಸ್ಯೆ ತನ್ನ ಪುತ್ರನ ಜೊತೆ ಸೇರಿ  ಪಿಡಿಓ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪಿಡಿಓ ರತ್ನಮ್ಮ ಗುಂಡಣ್ಣನವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಿಡಿಒ ರತ್ನಮ್ಮ ಅವರು ನೀಡಿದ ದೂರಿನಂತೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News