ಕೊಪ್ಪಳ | ಅತ್ಯಾಚಾರ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ: ಎಸ್ಪಿ ರಾಮ್ ಅರಸಿದ್ದಿ

Update: 2025-03-10 11:32 IST
ಕೊಪ್ಪಳ | ಅತ್ಯಾಚಾರ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ: ಎಸ್ಪಿ ರಾಮ್ ಅರಸಿದ್ದಿ

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ

  • whatsapp icon

ಕೊಪ್ಪಳ: ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಲೆಯರ ಮೇಲೆ ಅತ್ಯಾಚಾರ ನಡೆಸಿ ಒಬ್ಬನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಅವರು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇಬ್ಬರು ವಿದೇಶಿಯರು ಸೇರಿ ಐವರು ಪ್ರವಾಸಿಗರು ಇದ್ದ ಗುಂಪು ನಿಸರ್ಗ ವೀಕ್ಷಣೆಗೆ ಸಣಾಪುರದ ಕೆರೆಬಳಿ ಹೋಗಿತ್ತು ಆ ಸಂದರ್ಭದಲ್ಲಿ ಮೂವರು ಅಪರಿಚಿತರು ಅವರಬಳಿ ಬಂದು ನೂರು ರೂಪಾಯಿ ಕೇಳಿದ್ದಾರೆ ಆದರೆ ಪ್ರವಾಸಿಗರು 20 ರೂಪಾಯಿ ಕೊಟ್ಟಿದ್ದಾರೆ ಇನದನ್ನು ನಿರಾಕರಿಸಿದ ಆ ಯುವಕರು ಜಗಳ ತೆಗೆದು ಹಲ್ಲೆ ನಡೆಸಿ ಅತ್ಯಾಚಾರ ವೆಸಗಿದ್ದಾರೆ ನಂತರ ಅವರ ಬಳಿ ಇದ್ದ ಎರಡು ಮೊಬೈಲ್ ಫೋನ್ ಗಳನ್ನು ಕಸಿದುಕೊಂಡು ಮೂವರನ್ನು ನೀರಿಗೆ ತಳ್ಳಲಾಗಿತ್ತು ಎಂದರು.

ನೀರಿಗೆ ತಳ್ಳಿದ ಮೂವರಲ್ಲಿ ಇಬ್ಬರು ನೀರಿನಿಂದ ಹೊರಗೆ ಬಂದಿದ್ದಾರೆ. ನಾಸಿಕ್ ಮೂಲದ ಬಿಬಾಷ್ ಎಂಬಾತ ಪತ್ತೆಯಾಗಿರಲಿಲ್ಲ ಇದರಿಂದ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಭಾರತೀಯ ನ್ಯಾಯ ಸಹಿತ ಕಲಂ 309(ಬಿ) 311,64(2),(ಎಲ್ ),70(1) ಸೇರಿದಂತೆ ಮುಂತಾದ ಸೆಕ್ಷನ್ ಗಳಲ್ಲಿ ಪ್ರಕರಣ ದಾಕಲಾಗಿತ್ತು ಅದರಂತೆ ಆರು ವಿಶೇಷ ತಂಡಗಳನ್ನು ರಚಿಸಲಾಗಿತ್ತು ಗಂಗಾವತಿ ತಾಲೂಕಿನ ಸಾಯಿನಗರದ ನಿವಾಸಿಗಲಾದ ಮಲ್ಲೇಶ್(22) ಮತ್ತು ಚೇತನ್ ಸಾಯಿ ಸಿಳ್ಳೇಕ್ಯಾತರ್(21) ಎಂಬ ಇಬ್ಬರು ಆರೋಪಿಗಳನ್ನು  ಮಾರ್ಚ್ 8 ರಂದು ಬಂಧಿಸಲಾಗಿತ್ತು. ಆದರೆ ಮೂರನೇ ಆರೋಪಿಯ ಸೆರೆ ಆಗಿರಲಿಲ್ಲ ಎಂದರು.

ಮೂರನೇ ಆರೋಪಿ ತಮಿಳುನಾಡಿನ ಚೆನೈನಲ್ಲಿ ಇರುವುದಾಗಿ ಮಾಹಿತಿ ಬಂಡಮೆರೆಗೆ ನಮ್ಮ ತಂಡಗಳನ್ನು ಅಲ್ಲಿಗೆ ಕಳುಹಿಸಿ ೦೯ ಮಾರ್ಚ್ ೨೦೨೫ ರಂದು ಶರಣಬಸವರಾಜ್(೩೦) ಎಂಬ ಆರೋಪಿಯನ್ನು ಚೆನೈನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದರು.

ಮೂರು ಆರೋಪಿಗಳು ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ, ಆರೋಪಿಗಳಿಂದ ಬೈಕ್ ಅನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News