ನಾವು ಬಿಜೆಪಿ ಜೊತೆಗೆ ಕೈಜೋಡಿಸಿದ್ದರೂ ನಮ್ಮ ಸಿದ್ಧಾಂತಗಳನ್ನು ಮರೆತಿಲ್ಲ: ನಿಖಿಲ್ ಕುಮಾರಸ್ವಾಮಿ
ಕೊಪ್ಪಳ: ಜನತಾದಳ ಅಂದರೆ ಜನತಾ ಪರಿವಾರ ಎನ್ನುವುದು ದೇವೆಗೌಡರ ಕಾಲದಿಂದಲೇ ಬಂದಿರುವ ವಿಚಾರ. ಬಿಜೆಪಿ ಜೊತೆಗೆ ಕೈಜೋಡಿಸಿದ್ದೇವೆ ಎಂದರೆ ನಮ್ಮ ಸಿದ್ಧಾಂತಗಳನ್ನು ಮರೆತಿದ್ದೇವೆ ಅಂತ ಅಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬೂತ್ ಸಮಿತಿ ಆಗಬೇಕೆಂದು ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲೂ ಅಭಿಯಾನ ನಡೆಯುತ್ತಿದೆ. ಬಿಜೆಪಿ- ಜೆಡಿಎಸ್ ಸಂಬಂಧ ನಿರಂತರವಾಗಿ ಇರಬೇಕು ಅನ್ನೋದು ಎಲ್ಲರ ಬಯಕೆಯಾಗಿದೆ. ಜೆಡಿಎಸ್ ರಾಜ್ಯಾದ್ಯಕ್ಷ ಸ್ಥಾನ ಮುಂದಿನ ದಿನದಲ್ಲಿ ಯಾರಿಗೆ ಅನ್ನೋದು ತೀರ್ಮಾನ ವಾಗಲಿದೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮಗೆ ರಾಜ್ಯ ಅಂದ ಮೇಲೆ ಎಲ್ಲವೂ ಒಂದೇ, ಹಳೆ ಮೈಸೂರು ಪ್ರಾಂತ್ಯದಲ್ಲಿ ಬರುವ ಸಮಸ್ಯೆಗಳನ್ನು ಮಾತ್ರ ಉದ್ದೇಶಿಸಿ ಮಾತನಾಡುವಂತಹದ್ದಲ್ಲ. ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಯಾವುದೇ ಸಮಸ್ಯೆ ಇರಬಹುದು. ಅವುಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಸದನದ ಒಳಗಡೆ ಮಾಡುತ್ತೇವೆ ಎಂದರು.
ನಾನು ಚನ್ನಪಟ್ಟಣ ದಲ್ಲಿ ಸ್ಪರ್ಧಿಸುವ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಪಕ್ಷ ಸಂಘಟನೆಯನ್ನು ನಾವು ಮಾಡುತ್ತಿದ್ದೇವೆ. ಚನ್ನಪಟ್ಟಣ ಕುಮಾರಸ್ವಾಮಿ ಅವರು ಪ್ರತಿನಿಧಿಸಿದ ಕ್ಷೇತ್ರವಾಗಿದೆ. ಆದರೆ ರಾಜಕೀಯದಲ್ಲಿ ಅದಂತಹ ಬೆಳವಣಿಗೆಯಿಂದ ಕುಮಾರಸ್ವಾಮಿ ಯವರು ಕೇಂದ್ರ ಸಚಿವರಾಗಿದ್ದಾರೆ. ನಾನು ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಜನರ ಅಭಿಪ್ರಾಯ ಸಂಗ್ರಹ ಮಾಡಿ ವರಿಷ್ಟರ ಮುಂದೆ ಇಡುತ್ತೇನೆ. ಆದರೆ ಟಿಕೆಟ್ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಅಲ್ಲಿ ಯಾರೇ ಆಗಲಿ ಎನ್ ಡಿಎ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಎಂದರು.
ಕುಮಾರಸ್ವಾಮಿಯವರು ರಾಜಕಾರಣದಲ್ಲಿ ಹಿಟ್ ಆಂಡ್ ರನ್ ಮಾಡಿಲ್ಲ,ಎಲ್ಲಾ ದಾಖಲಾತಿ ಗಳನ್ನು ಇಟ್ಟುಕೊಂಡು ಮಾತನಾಡುತ್ತಾರೆ.ಯಾವಾಗ ಏನು ಮಾಡಬೇಕೋ, ಬಿಡುಗಡೆ ಮಾಡಬೇಕೋ ಅದು ಗೊತ್ತು. ಕಾಂಗ್ರೆಸನ್ನು ದೂರ ಇಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಐದು ಗ್ಯಾರಂಟಿಗಳನ್ನು ಸರ್ಕಾರ ಸರಿಯಾಗಿ ಅನುಷ್ಟಾನ ಮಾಡಿಲ್ಲ ,ಗ್ಯಾರಂಟಿ ನೀಡಿರೋ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಇವಾಗ ಏನಾಗಿದೆ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಶಾಖೆಂಪುರ, ಜಿಲ್ಲಾಧ್ಯಕ್ಷ ಭೂಮರೆಡ್ದಿ, ಸಿವಿ ಚಂದ್ರಶೇಖರ ಮುಂತಾದವರು ಉಪ್ಥಿತರಿದ್ದರು.