ಮಾಲ್ಡೀವ್ಸ್: ಮೇಯರ್ ಚುನಾವಣೆಯಲ್ಲಿ ಭಾರತ ಪರ ಪಕ್ಷಕ್ಕೆ ಗೆಲುವು

Update: 2024-01-14 04:13 GMT

twitter.com/LeaderMaldives

ಮಾಲೆ: ಮಾಲ್ಡೀವ್ಸ್ ರಾಜಧಾನಿಯ ಮೇಯರ್ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷ ಹಾಗೂ ಭಾರತ ಪರ ನಿಲುವಿಗೆ ಹೆಸರಾದ ಮಾಲ್ಡೀವನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಭರ್ಜರಿ ಜಯ ಸಾಧಿಸಿದೆ. ಇದು ಆಡಳಿತಾರೂಢ ಪಕ್ಷದ ಮುಖಂಡ ಹಾಗೂ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಅವರಿಗೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಎಂಡಿಪಿ ಅಭ್ಯರ್ಥಿ ಅದಾಮ್ ಅಝೀಂ ಅವರು ಮಾಲೆಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚಿನ ವರೆಗೂ ಮುಯಿಝ್ಝು ಈ ಹುದ್ದೆಯಲ್ಲಿದ್ದರು. ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಝೀಂ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಮಾಲ್ಡೀವ್ಸ್ ಮಾಧ್ಯಮಗಳು ವರದಿ ಮಾಡಿವೆ. ರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ಭಾರತ ಪರ ನಿಲುವಿಗೆ ಹಸರಾದ ಮುಹಮ್ಮದ್ ಸ್ವಾಲಿಹ್ ನೇತೃತ್ವದ ಎಂಡಿಪಿಯನ್ನು ಸೋಲಿಸಿ ಚೀನಾ ಪರ ವಿಚಾರಧಾರೆಯ ಮುಯಿಝ್ಝು ಅವರ ಪಕ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿತ್ತು.

ಮೇಯರ್ ಚುಣಾವಣೆಯ 41 ಮತಪೆಟ್ಟಿಗೆಗಳ ಎಣಿಕೆ ಕಾರ್ಯ ಮುಗಿದಿದ್ದು, ಅಝೀಂ 5303 ಮತಗಳನ್ನು ಪಡೆದು ಅಗಾಧ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಆಯಿಶತ್ ಅಝೀಮಾ ಶಕೂರ್ ಕೇವಲ 3301 ಮತಗಳನ್ನು ಗಳಿಸಿದ್ದಾರೆ ಎಂದು ಆನ್ ಲೈನ್ ಸುದ್ದಿತಾಣಗಳು ವರದಿ ಮಾಡಿವೆ. ಈ ಚುನಾವಣೆಯಲ್ಲಿ ತೀರಾ ಕಡಿಮೆ ಮತದಾನವಾಗಿತ್ತು.

ಸಂಸತ್ತಿನಲ್ಲಿ ಬಹುತಮ ಹೊಂದಿರುವ ಎಂಡಿಪಿಯ ರಾಜಕೀಯ ಭವಿಷ್ಯಕ್ಕೆ ಮೇಯರ್ ಚುಣಾವಣೆಯು ಪುನಶ್ಚೇತನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News