ಮಂಡ್ಯ | ಮದ್ಯ ಸೇವನೆ ವೇಳೆ ಜಗಳ; ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ
Update: 2025-03-20 19:16 IST

ಮೋಹನ್‍ಕುಮಾರ್(44)
ಮಂಡ್ಯ : ಮದ್ಯ ಸೇವನೆ ವೇಳೆ ಮಾತಿಗೆ ಮಾತು ನಡೆದು ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಗ್ರಾಮದ ಕೋಟೆಮಾಳ ಬಡಾವಣೆ ನಿವಾಸಿ ಮೋಹನ್‍ಕುಮಾರ್(44) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸ್ನೇಹಿತ ರವಿಚಂದ್ರ ಎಂಬುವನು ಕೊಲೆ ಮಾಡಿದ್ದಾನೆನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ತಡರಾತ್ರಿ ಮೋಹನ್‍ಕುಮಾರ್ ಮನೆಯಲ್ಲಿ ಇಬ್ಬರೂ ಮದ್ಯ ಸೇವಿಸುತ್ತಿದ್ದಾಗ ಮಾತಿಗೆ ಮಾತು ಬೆಳೆದು ರವಿಚಂದ್ರ ಮೋಹನ್‍ಕುಮಾರ್‌ನ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಪ್ರಕರಣ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಈ ಸಂಬಂಧ ಕೆಆರ್‌ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೋಂಡಿದ್ದಾರೆ.