ಗಣೇಶ ಮೆರವಣಿಗೆ ಗಲಭೆ ಪ್ರಕರಣ: ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕ ಮೃತ್ಯು

Update: 2024-09-21 17:31 GMT

ನಾಗಮಂಗಲ: ಗಣೇಶೋತ್ಸವ ಕೋಮುಗಲಭೆ ಪ್ರಕರಣದ ಬಂಧನ ಭೀತಿಯಲ್ಲಿ ತಲೆಮರಿಸಿಕೊಂಡಿದ್ದ ಬದರಿಕೊಪ್ಪಲು ಗ್ರಾಮದ ವಿವಾಹಿತ ಯುವಕ ಕಿರಣ್(28) ಬ್ರೈನ್ ಸ್ಟ್ರೋಕ್‍ನಿಂದ ಮೃತಪಟ್ಟಿರುವ ಘಟನೆ ನಡೆದಿರುವುದು ವರದಿಯಾಗಿದೆ.

ಗುರುವಾರ ಬ್ರೈನ್ ಸ್ಟೋಕ್‍ಗೆ ಒಳಗಾಗಿದ್ದ ಕಿರಣ್‍ನನ್ನು ತಕ್ಷಣವೇ ಬೆಂಗಳೂರಿನ ನಿಮ್ಹಾನ್ಸ್‍ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ಬದ್ರಿಕೊಪ್ಪಲು ಗ್ರಾಮದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಭುಗಿಲೆದ್ದಿದ್ದ ಗಲಭೆ ಪ್ರಕರಣದ ಆರೋಪಿ ಮೃತ ಕಿರಣ್ ತಂದೆ ಕುಮಾರ್ ಜೈಲಿನಲ್ಲಿದ್ದಾರೆ. ಪೊಲೀಸರು ತನ್ನನ್ನೂ ಬಂಧಿಸಬಹುದೆಂದು ಕಿರಣ್ ಗ್ರಾಮ ತೊರೆದಿದ್ದ ಎನ್ನಲಾಗಿದೆ.

ಪೊಲೀಸರ ಸ್ಪಷ್ಟನೆ:

ಬ್ರೈನ್ ಸ್ಟ್ರೋಕ್‍ನಿಂದ ಮೃತಪಟ್ಟಿರುವ ಕಿರಣ್, ಗಲಭೆ ಪ್ರಕರಣದ ಆರೋಪಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಆದರೆ, ಮೃತಪಟ್ಟಿರುವ ಕಿರಣ್ ಆರೋಪಿಯಲ್ಲ. ಪ್ರಕರಣದ ಎ1 ಆರೋಪಿಯಾಗಿರುವ ಕಿರಣ್‍ ಕುಮಾರ್ ಬೇರೆ ವ್ಯಕ್ತಿಯಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News