ಮಂಗಳೂರು: ಜಂಇಯ್ಯತುಲ್ ಫಲಾಹ್ ಮಾಜಿ ಜಿಲ್ಲಾಧ್ಯಕ್ಷ ಪಿ.ಬಿ. ಅಬ್ದುಲ್ ರಝಾಕ್ ನಿಧನ

Update: 2023-11-14 16:12 GMT

ಮಂಗಳೂರು: ಹಿರಿಯ ಸಮಾಜ ಸೇವಕ, ಧಾರ್ಮಿಕ ‌ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಪಿಬಿ ಅಬ್ದುಲ್ ರಝಾಕ್ (67) ಸೋಮವಾರ ತಡರಾತ್ರಿ ದುಬೈಯ ಆ್ಯಸ್ಟರ್ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ಕಾಟಿಪಳ್ಳದವರಾಗಿದ್ದು, ಪ್ರಸ್ತುತ ಕುಲಶೇಖರದಲ್ಲಿ ವಾಸವಾಗಿದ್ದ ಇವರು ಮಂಗಳೂರಿನಲ್ಲಿ ಇನ್ ಫ್ಯಾಶನ್ ರೆಡಿಮೇಡ್ ಬಟ್ಟೆಯಂಗಡಿ ನಡೆಸುತ್ತಿದ್ದರು. ತಿಂಗಳ ಹಿಂದೆ ದುಬೈಗೆ ತೆರಳಿದ್ದರು. ಮೆದುಳು ರಕ್ತಸ್ರಾವಕ್ಕೀಡಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಂಇಯ್ಯತುಲ್ ಫಲಾಹ್ ದ.ಕ.‌ಮತ್ತು ಉಡುಪಿ ಜಿಲ್ಲಾಧ್ಯಕ್ಷರಾಗಿದ್ದ ಇವರು ಪ್ರಸ್ತುತ ಜಂಇಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಟಿಪಳ್ಳದ ನೂರುಲ್ ಹುದಾ ಎಜುಕೇಶನ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಅಲ್ ವಫಾ ಮತ್ತು ಏಸ್ ಅಕಾಡಮಿಯ ಟ್ರಸ್ಟಿಯಾಗಿದ್ದರು.

ಪತ್ನಿ, ಮೂವರು ಪುತ್ರರು ಮತ್ತು ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಮೃತರ ದಫನ ಕಾರ್ಯವನ್ನು ದುಬೈಯಲ್ಲೇ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪಿ.ಬಿ. ಅಬ್ದುಲ್ ರಝಾಕ್ ನಿಧನಕ್ಕೆ ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ಸಂತಾಪ

ಅವಿಭಜಿತ ದ‌‌.ಕ. ಜಿಲ್ಲೆಯ ಜಂಇಯ್ಯತುಲ್ ಫಲಾಹ್‌ನ ಮಾಜಿ ಅಧ್ಯಕ್ಷ ಪಿ.ಬಿ. ಅಬ್ದುಲ್ ರಝಾಕ್ ಅವರ ನಿಧನಕ್ಕೆ ಮುಸ್ಲಿಂ ಎಜುಕೇಶನ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್‌ನ ಗೌರವಾಧ್ಯಕ್ಷ ಉಮರ್ ಟೀಕೆ ಸಂತಾಪ ವ್ಯಕ್ತಪಡಿಸಿದ್ದಾರೆ‌.

ಅಬ್ದುಲ್ ರಝಾಕ್ ಅವರ ನಿಧನದ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಅವರು ಓರ್ವ ಜನಸೇವಕ, ವಿದ್ಯಾಪ್ರೇಮಿ, ಆಪತ್ಭಾಂದವ. ಎಲ್ಲಕ್ಕಿಂತ ‌ಮಿಗಿಲಾಗಿ ಎಲ್ಲರನ್ನು ಅತೀವವಾಗಿ ಪ್ರೀತಿಸುವ ಮತ್ತು ಎಲ್ಲರಿಂದಲೂ ಅತೀವವಾಗಿ ಪ್ರೀತಿಸಲ್ಪಟ್ಟ ವ್ಯಕ್ತಿಯಾಗಿದ್ದರು. ಇವರ ನಿಧನದಿಂದ "ಮೀಫ್" ಅತ್ಯಂತ ಬದ್ಧತೆಯ, ಕಳಕಳಿಯ, ಸಮರ್ಥ ಬೆಂಬಲಿಗನನ್ನು ಕಳಕೊಂಡಿದೆ. ಬಂಧುಬಳಗಕ್ಕೆ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹನು‌ ಕರುಣಿಸಲಿ ಎಂದು ತನ್ನ ಸಂತಾಪ ಸೂಚಕದಲ್ಲಿ ಉಮರ್ ಟೀಕೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News