ಮಂಗಳೂರು: ಸ್ಕೇಟಿಂಗ್ ಚಾಂಪಿಯನ್‌ಶಿಪ್‌ ನಲ್ಲಿ ಅನಘಾ, ಆರ್ನಾಗೆ ಪದಕ

Update: 2023-11-16 06:08 GMT

ಮಂಗಳೂರು: ದಕ್ಷಿಣ ಕನ್ನಡ ರೋಲರ್ ಸ್ಪೋಟ್ಸ್ ಅಸೋಸಿಯೇಶನ್ ಮಂಗಳೂರು ನೇತೃತ್ವದಲ್ಲಿ ನ.9 ರಿಂದ 12ರ ವರೆಗೆ ಮಂಗಳೂರಿನಲ್ಲಿ ನಡೆದ  39ನೇ ಕರ್ನಾಟಕ ಸ್ಟೇಟ್ ಸೆಲೆಕ್ಷನ್ ಟೇಲ್ಸ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ ನಲ್ಲಿ ಅನಘಾ ರಾಜೇಶ್ ಮತ್ತು ಆರ್ನಾ ರಾಜೇಶ್ ಪದಕಗಳನ್ನು ಗೆದ್ದಿದ್ದಾರೆ.

11ರಿಂದ 14 ವಯೋಮಿತಿಯ ಸ್ಪರ್ಧೆಯಲ್ಲಿ ಅನಘಾ ರಾಜೇಶ್ 3,000 ಮೀ. ರೋಡ್ ರೇಸ್ ಹಾಗೂ 1000 ಮೀ. ರಿಂಕ್ ರೇಸ್‌ನಲ್ಲಿ 2 ಬೆಳ್ಳಿ, 5000ಮೀ. ರಿಂಕ್ ಎಲಿಮಿನೇಶನ್ ರೇಸ್‌ನಲ್ಲಿ 1 ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. 7ರಿಂದ 9 ವರ್ಷ ವಯೋಮಿತಿಯ ವಿಭಾಗದಲ್ಲಿ ಆರ್ನಾ ರಾಜೇಶ್ 1,000 ಮೀ. ರಿಂಕ್ ರೇಸ್‌ನಲ್ಲಿ 1 ಬೆಳ್ಳಿ ಪದಕ ಗೆದ್ದಿದ್ದಾರೆ.

ಮಂಗಳೂರು ಬಿಜೈಯ ಲೋರ್ಡ್ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅನಘಾ, ಹಾಗೂ 3ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆರ್ನಾ ಡಾ. ರಾಜೇಶ್ ಹುಕ್ಕೇರಿ ಮತ್ತು ಡಾ. ಅನಿತಾ ರಾಜೇಶ್ ದಂಪತಿಯ ಮಕ್ಕಳಾಗಿದ್ದಾರೆ.

ಅನಘಾ ಹಾಗೂ ಆರ್ನಾ ಕುಡ್ಲ ರೋಲರ್ ಸ್ಕೇಟಿಂಗ್ ಕ್ಲಬ್‌ನಿಂದ ತರಬೇತಿ ಪಡೆಯುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News