ನಮ್ಮನ್ನು ಆಳುವುದು ಈ ನೆಲದ ಕಾನೂನೇ ಹೊರತು ರಾಜಕೀಯ ಪಕ್ಷಗಳಲ್ಲ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2024-03-30 18:12 GMT

ಮೈಸೂರು: ನಮ್ಮನ್ನು ಆಳುವುದು ಯಾವುದೋ ಒಂದು ಸರಕಾರ ಅಲ್ಲ, ಸರಕಾರ ಬರುತ್ತೆ ಹೋಗುತ್ತೆ. ನಮ್ಮನ್ನು ಆಳುವುದು ಈ ನೆಲೆದ ಕಾನೂನೇ ಹೊರತು ರಾಜಕೀಯ ಪಕ್ಷಗಳಲ್ಲ. ಪಕ್ಷಗಳು ಈ ದೇಶದ ಅಖಂಡತೆಗೆ ಅಪಾಯ, ಪಕ್ಷಗಳು ಸೋದರತೆ, ಸಮಗ್ರತೆಗೆ ಅಪಾಯ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.

ನಗರದ ಕಲಾಮಂದಿರದಲ್ಲಿ ಶನಿವಾರ ಚಾರ್ವಾಕ ಪ್ರಸ್ಥುತಿಯ ವೈಚಾರಿಕ ಸಮ್ಮೇಳನದ ವತಿಯಿಂದ "ದಮನಿತರ ಬಂಗಾರದ ದಿನ" ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕಾನೂನು ಬರುವ ಹಿಂದೆ ಇನ್ನೊಂದು ಕಾನೂನು ಇತ್ತು. ದಮನಿತರು, ಶೋಷಿತರು ಎನ್ನುವ ಪದಗಳನ್ನು ಇನ್ನು ಎಷ್ಟು ವರ್ಷಗಳ ಕಾಲ ಬಳಸಬೇಕು ಆದ್ದರಿಂದ ನಾವು ಈ ಪದಗಳನ್ನು ಬಳಸುವುದೇ ಬೇಡ ಎಂದು ಹೇಳಿದರು.

ಮತದಾರ ಪ್ರಭುಗಳು ಭ್ರಷ್ಟರಾದರೆ, ಈ ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಭ್ರಷ್ಟಾಚಾರದಲ್ಲಿ ಇರುತ್ತದೆ. ಯಾವ ಸಮುದಾಯವು ಹಕ್ಕು ಮತ್ತು ಅಧಿಕಾರದಿಂದ ವಂಚಿರರಾಗುತ್ತಾರೋ ಅ ಸಮುದಾಯ ಶೋಷಣೆಗೆ ಒಳಗಾಗುತ್ತದೆ ಎಂದು ನುಡಿದರು.

ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ಗಳನ್ನು ಆಹ್ವಾನ ಕೊಡದ ಈ ದೇಶದಲ್ಲಿ ಯಾವ ಸಂವಿಧಾನ ಆಳುತ್ತಿದೆ. ಚಂಡೀಗಡದಲ್ಲಿ ಚುನಾವಣೆ ಆಯೋಗವನ್ನು ಸುಪ್ರೀಂ ಕೋರ್ಟ್ ನಲ್ಲಿ ಛೀಮಾರಿ ಹಾಕುತ್ತದೆ ಎಂದರೆ ನಾವು ಯಾವ ಸಂವಿಧಾನದಲ್ಲಿ ಇದ್ದೇವೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಸಮಯದಲ್ಲಿ ಯಾವ ಸಂವಿಧಾನ ಇದೆ?. ಸುಪ್ರೀಂ ಕೋಟ್೯ ನಲ್ಲಿ ಅಂಬೇಡ್ಕರ್ ಭಾವಚಿತ್ರ ಇಡಲು 75 ವರ್ಷಗಳು ಬೇಕಾಯಿತು. ನಾವು ಯಾವ ಸಂವಿಧಾನದಲ್ಲಿ ಇದ್ದೇವೆ ಎಂದು ಪ್ರಶ್ನಿಸಿದರು.

ಬುದ್ದಿವಂತ ಮತ್ತು ಜ್ಞಾನಿಗಳು ಮಾತನಾಡಲಿಲ್ಲ ಎಂದರೆ ಅದು ಪ್ರಕೃತಿಗೆ ಮಾಡುವ ಅವಮಾನ. ದೇಶದ ಎಲ್ಲ ಸಮಸ್ಯೆಗಳಿಗೆ ಉತ್ತರ ನಿಮ್ಮ ಒಂದು ಮತ. ಒಂದು ಮತ ದೇಶದ ಚರಿತ್ರೆ ಯನ್ನು ಬದಲಾಯಿಸುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News