ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ‌ಟಿ.ರವಿ ಅವಹೇಳನಕಾರಿ ಪದ ಬಳಸಿದ್ದು ಸತ್ಯ : ಯತೀಂದ್ರ ಸಿದ್ದರಾಮಯ್ಯ

Update: 2024-12-23 09:51 GMT

ಯತೀಂದ್ರ ಸಿದ್ದರಾಮಯ್ಯ

ಮೈಸೂರು : "ಸಿ.ಟಿ ರವಿ ಅವರು ಪರಿಷತ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಹೇಳನಕಾರಿ ಪದ ಬಳಸಿದ್ದು ಸತ್ಯ. ನಾನೇ ಆ ಪದವನ್ನು ಕೇಳಿಸಿಕೊಂಡು ಒಂದು ಕ್ಷಣ ಗಾಬರಿಯಾಗಿ ಬಿಟ್ಟೆ" ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಏನು ಇಂತಹ ಪದಗಳನ್ನು ಬಳಸುತ್ತಿದ್ದಾರಲ್ಲ ಅಂದು ಕೊಂಡೆ. ತಕ್ಷಣ ನಾನು ಲಕ್ಷ್ಮೀ ಹೆಬ್ಬಾಳ್ಕರ್ ಬಳಿಗೂ ಹೋದೆ. ಆಗ ಅವರು ಕೂಡ ನನಗೆ ಸಿ.ಟಿ ರವಿ ಬಳಸಿದ ಪದವನ್ನು ಹೇಳಿದರು. ಈಗ ಸಿ.ಟಿ ರವಿ ನಾನು ಆ ಪದವನ್ನು ಬಳಸಿಲ್ಲ ಎಂದು ಹೇಳುತ್ತಿದ್ದಾರೆ‌. ಕೇವಲ ಸಿಂಪತಿ ಗಿಟ್ಟಿಸಿಕೊಳ್ಳಲು ಸಿ.ಟಿ ರವಿ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ಮಾನ ಮರ್ಯಾದೆ ಏನು ಇಲ್ಲ. ಹೀಗಾಗಿ ಅವರು ಸಿ.ಟಿ ರವಿ ಪರ ನಿಂತಿದ್ದಾರೆ. ಸಿಟಿ ರವಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಲು ಯತ್ನಿಸಿದರು, ಕೊಲೆ ಮಾಡುವ ಪ್ರಯತ್ನ ನಡೆದಿತ್ತು ಎಂಬುಂದೆಲ್ಲಾ ಶುದ್ಧ ನಾಟಕ ಎಂದು ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News