ಸಿಎಂ ಸಿದ್ಧರಾಮಯ್ಯ ಒಬ್ಬ ಮಾಸ್ ಲೀಡರ್, ಅವರನ್ನು ಭ್ರಷ್ಟ ಎನ್ನುವುದಿಲ್ಲ : ಮಾಜಿ ಸಂಸದ ಪ್ರತಾಪ್ ಸಿಂಹ

Update: 2024-07-24 13:29 GMT

ಮೈಸೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಒಬ್ಬ ಮಾಸ್ ಲೀಡರ್, ನಾನು ಈಗಲೂ ಸಿದ್ಧರಾಮಯ್ಯ ಅವರನ್ನು ಭ್ರಷ್ಟ ಎನ್ನುವುದಿಲ್ಲ. ಮುಡಾ ನಿವೇಶನ ಹಂಚಿಕೆಯಲ್ಲಿ ಆರೋಪ ಬಂದಿರುವುದರಿಂದ ನಿವೇಶನವನ್ನು ಹಿಂದಿರುಗಿಸಿ, ಮೇಲ್ಪಂಕ್ತಿ ಹಾಕಿಕೊಡಿ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಸಲಹೆ ನೀಡಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನೀವು ನಿವೇಶನ ಹಿಂತಿರುಗಿಸಿ, ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ನಾನು ಈಗಲೂ ಸಿದ್ದರಾಮಯ್ಯ ಅವರನ್ನು ಭ್ರಷ್ಟ ಎನ್ನಲ್ಲ. ರಾಜ್ಯದಲ್ಲಿ ಸಿಎಂ ಆದವರಿಗೆ ಹೋಲಿಸಿದರೆ ಸಿದ್ದರಾಮಯ್ಯ ಅಷ್ಟೇನೂ ಆಸ್ತಿವಂತರಲ್ಲ. ಯಕಶ್ಚಿತ್ 14 ನಿವೇಶನಗಳಿಗೆ ನಿಮ್ಮ ವರ್ಚಸ್ಸು ಕುಗ್ಗುವಂತೆ ಮಾಡಿಕೊಳ್ಳಬೇಡಿ. ಕೂಡಲೇ ಮುಡಾಗೆ ನಿವೇಶನ ಹಿಂದಿರುಗಿಸಿ ಘನತೆ ಉಳಿಸಿಕೊಳ್ಳಿʼ ಎಂದು ಹೇಳಿದರು.

ಮುಡಾ ಹಗರಣ ಕುರಿತು ಸಂತೋಷ್ ಹೆಗ್ಡೆ, ಎನ್.ಕುಮಾರ್ ಅವರಂತ ದಕ್ಷ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿ. ನಿಮ್ಮ ಗಮನಕ್ಕೆ ಬಾರದೆ ನಿಮ್ಮ ಬಾಮೈದ ತಪ್ಪು ಮಾಡಿರಬಹುದು. ನೀವು ನಿವೇಶನ ಹಿಂತಿರುಗಿಸಿ, ನಿಮ್ಮ ತೀರ್ಮಾನದಿಂದ 4 ಸಾವಿರ ಕೋಟಿ ರೂ. ಮುಡಾಗೆ ಲಾಭ ಬರುತ್ತೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News