ಮಹಾರಾಷ್ಟ್ರ ರಾಜಕೀಯ | ಶರದ್ ಪವಾರ್ ಬಣಕ್ಕೆ ಮರಳಿದ ಇಬ್ಬರು ಶಾಸಕರು

Update: 2023-07-04 03:37 GMT

ಫೋಟೋ: PTI

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ತಮಗೆ 40 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಂಡ ಮರುದಿನವೇ ಪವಾರ್ ಜತೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದ ಇಬ್ಬರು ಶಾಸಕರು ಶರದ್ ಪವಾರ್ ಬಣಕ್ಕೆ ವಾಪಸ್ಸಾಗಿದ್ದಾರೆ.

ಸತಾರಾ ಶಾಸಕ ಮಕರಂದ್ ಪಾಟೀಲ್ ಮತ್ತು ಉತ್ತರ ಕರಾಡ್ ಶಾಸಕ ಬಾಳಾಸಾಹೇಬ್ ಪಾಟೀಲ್ ಅವರು ಮೂಲ ಎನ್‍ಸಿಪಿಗೆ ವಾಪಸ್ಸಾಗಿದ್ದಾರೆ.

ಏತನ್ಮಧ್ಯೆ ಉಭಯ ಬಣಗಳ ಮುಖಂಡರು ಪರಸ್ಪರ ಎದುರಾಳಿ ಬಣಗಳ ಶಾಸಕರ ವಿರುದ್ಧ ಅನರ್ಹತೆ ಕ್ರಮ ಕೈಗೊಳ್ಳುವಂತೆ ಸ್ಪೀಕರ್‍ಗೆ ಮನವಿ ಸಲ್ಲಿಸಿರುವುದಾಗಿ ಪ್ರಕಟಿಸಿದ್ದಾರೆ.

ರಾಜಭವನಕ್ಕೆ ತೆರಳಿರುವ ಶಿರೂರು ಸಂಸದ ಅಮೋಲ್ ಖೋಲೆ ಕೂಡಾ ಶರದ್ ಪವಾರ್ ಬಣಕ್ಕೆ ವಾಪಸ್ಸಾಗುವುದಾಗಿ ಘೋಷಿಸಿದ್ದಾರೆ.

ಅಳಿಯನ ಬಣದ ಮೇಲಿನ ಮೊದಲ ಪ್ರಹಾರವಾಗಿ ಶರದ್ ಪವಾರ್ ಅವರು ಸಂಸದರಾದ ಪ್ರಫುಲ್ ಪಟೇಲ್ ಮತ್ತು ಸುನೀಲ್ ತತ್ಕರೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಅಜಿತ್ ಬಣ, ಜಯಂತ್ ಪಾಟೀಲ್ ಅವರನ್ನು ಎನ್‍ಸಿಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ತತ್ಕರೆ ಅವರನ್ನು ಹೊಸ ಅಧ್ಯಕ್ಷರಾಗಿ ಘೋಷಿಸಿದ್ದಾರೆ. ತತ್ಕರೆಯವರ ಪುತ್ರಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಅಜಿತ್ ಪವಾರ್ ಹಾಗೂ ಅವರ ಜತೆ ತೆರಳಿದ ಎಂಟು ಮಂದಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶರದ್ ಪವಾರ್ ಬಣ ವಿಧಾನಸಭಾ ಸ್ಪೀಕರ್‍ಗೆ ಮನವಿ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News