ಬಿಜೆಪಿಯ ಶೇ.12ರಷ್ಟು ಸಂಸದರು ‘ಕುಟುಂಬ ರಾಜಕಾರಣಿ’ಗಳು: ಮಹುವಾ ಮೊಯಿತ್ರಾ
Update: 2023-07-19 12:40 GMT
ಕೋಲ್ಕತಾ: ಪ್ರತಿಪಕ್ಷಗಳದು ಕುಟುಂಬ ರಾಜಕಾರಣ ಎಂದು ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಹುವಾ ಮೊಯಿತ್ರಾ ಅವರು ಶೇ.12ರಷ್ಟು ಬಿಜೆಪಿ ಸಂಸದರು ವಂಶಪಾರಂಪರ್ಯದ ರಾಜಕಾರಣಿಗಳು ಎಂದು ಟ್ವೀಟ್ ಮಾಡಿದ್ದಾರೆ.
‘‘ಪ್ರತಿಪಕ್ಷಗಳ ‘ಪರಿವಾರತಂತ’ದ ಬಗ್ಗೆ ಪ್ರಧಾನಿಯವರ ಭಾಷಣವನ್ನು ಕೇಳುವುದಕ್ಕೆ ಸೊಗಸಾಗಿದೆ. ಆದರೆ ನವೆಂಬರ್ ನಲ್ಲಿ ಹರ್ಯಾಣದ ಆದಂಪುರ, ತೆಲಂಗಾಣದ ಮುನುಗೋಡ್ ಹಾಗೂ ಉತ್ತರಪ್ರದೇಶದ ಗೋಲಾ ಗೋಕರ್ಣನಾಥ ಈ ಎಲ್ಲಾ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯು ವಂಶಪಾರಂಪರ್ಯದ ರಾಜಕಾರಣಿಗಳನ್ನು ಕಣಕ್ಕಿಳಿಸಿತ್ತು ಎಂದವರು ಟ್ವೀಟಿಸಿದ್ದಾರೆ.
ಪ್ರಧಾನಿ ಮೋದಿಯವರನ್ನು ‘ಜೂಟ್ ಗುರು (ಸುಳ್ಳಿನಗುರು)’ ಎಂದು ವ್ಯಂಗ್ಯವಾಡಿದ ಮಿತ್ರಾ ಅವರು ಬಿಜೆಪಿಯಲ್ಲಿ ವಂಶರಾಜಕಾರಣದಿಂದ ಬಂದ ಶಾಸಕರ ಪಟ್ಟಿಯನ್ನೇ ಪ್ರಕಟಿಸಿದ್ದಾರೆ. ಬಿಜೆಪಿಯ ಒಟ್ಟು ಸಂಸದರ ಪೈಕಿ ಶೇ.12ರಷ್ಟು ಮಂದಿ ವಂಶಪಾರಂಪರ್ಯದ ರಾಜಕಾರಣಿಗಳೆಂದು ಹೇಳಿದ್ದಾರೆ.