ಪಂಜಾಬ್ | ಬಟಿಂಡಾದಲ್ಲಿ ಭಾರೀ ಮಳೆಗೆ ಸೇತುವೆಯಿಂದ ಉರುಳಿದ ಬಸ್ ; 8 ಮಂದಿ ಮೃತ್ಯು
Update: 2024-12-27 13:38 GMT
ಚಂಡೀಗಢ : ಪಂಜಾಬ್‌ನ ಬಟಿಂಡಾದಲ್ಲಿ ಭಾರೀ ಮಳೆಗೆ ನಿಯಂತ್ರಣ ತಪ್ಪಿ ಬಸ್ ಸೇತುವೆಯಿಂದ ಉರುಳಿದ ಪರಿಣಾಮ ಎಂಟು ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಸೇತುವೆಯ ಎರಡೂ ಬದಿಗೆ ಯಾವುದೇ ತಡೆ ಬೇಲಿ ಇಲ್ಲದೇ ಇರುವುದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
20 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ತಲ್ವಾಂಡಿ ಸಾಬೋದಿಂದ ಬಟಿಂಡಾಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಆಡಳಿತದೊಂದಿಗೆ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆಯಲ್ಲಿ ನೆರವಾದರು.
ಘಟನೆಯಲ್ಲಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.