ಉತ್ತರ ಪ್ರದೇಶ | 2019 ರ ಬುಲ್ಡೋಝರ್ ಕಾರ್ಯಾಚರಣೆಗೆ ʼಸುಪ್ರೀಂʼ ತರಾಟೆ ; ಮನೆ ಮಾಲೀಕರಿಗೆ 25 ಲಕ್ಷ ರೂ. ಪಾವತಿಸಲು ಆದೇಶ
Update: 2024-11-06 17:18 GMT
ಹೊಸದಿಲ್ಲಿ: 2019 ರಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮನೆಯನ್ನು ನೆಲಸಮಗೊಳಿಸಿ ಉತ್ತರ ಪ್ರದೇಶದ ಅಧಿಕಾರಿಗಳ ಧೋರಣೆಯನ್ನು ಟೀಕಿಸಿದ ಸುಪ್ರೀಂ ಕೋರ್ಟ್ ಸಂತ್ರಸ್ತನಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬುಧವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ನಡೆದ ಅಕ್ರಮ ಕಾರ್ಯಾಚರಣೆಗೆ ಸಂಬಂಧಿಸಿದ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತು.
ರಸ್ತೆ ಅಗಲೀಕರಣಕ್ಕಾಗಿ 2019 ರಲ್ಲಿ ನೆಲಸಮ ಕಾರ್ಯಾಚರಣೆಗೆ ಸಂಬಂಧಿಸಿದ ವಿಚಾರಣೆ ನಡೆಸುತ್ತಿದ್ದ ಪೀಠವು, "ನೀವು ಬುಲ್ಡೋಝರ್‌ನೊಂದಿಗೆ ಬಂದು ರಾತ್ರೋರಾತ್ರಿ ಮನೆ ಕೆಡವಲು ಸಾಧ್ಯವಿಲ್ಲ" ಎಂದು ಟೀಕಿಸಿತು.