ಮಹಾರಾಷ್ಟ್ರ: ಎರಡು ಖಾಸಗಿ ಬಸ್ ಗಳ ನಡುವೆ ಢಿಕ್ಕಿ: 6 ಮಂದಿ ಮೃತ್ಯು, 20 ಜನರಿಗೆ ಗಾಯ

Update: 2023-07-29 04:57 GMT

ಮುಂಬೈ: ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು,20 ಮಂದಿ ಗಾಯಗೊಂಡಿದ್ದಾರೆ.

ಮಲ್ಕಾಪುರ ಪ್ರದೇಶದ ನಂದೂರ್ ನಾಕಾ ಫ್ಲೈ ಓವರ್ ನ ಎನ್ ಎಚ್-53ರಲ್ಲಿ ಬೆಳಗ್ಗಿನ ಜಾವ 2:30ರ ಸುಮಾರಿ ಎರಡು ಖಾಸಗಿ ಬಸ್ ಗಳ ನಡುವೆ ಢಿಕ್ಕಿ ಸಂಭವಿಸಿದೆ.

ಬಾಲಾಜಿ ಟ್ರಾವಲ್ಸ್ ಮಾಲಕತ್ವದ ಒಂದು ಬಸ್ ಅಮರನಾಥ ಯಾತ್ರೆಯ ಯಾತ್ರಾರ್ಥಿಗಳೊಂದಿಗೆ ಹಿಂಗೋಲಿ ಜಿಲ್ಲೆಗೆ ವಾಪಸಾಗುತ್ತಿತ್ತು. ಮತ್ತೊಂದು ಬಸ್ ರಾಯಲ್ ಟ್ರಾವಲ್ಸ್ ಕಂಪೆನಿಗೆ ಸೇರಿದ್ದಾಗಿದೆ ಎಂದು ನಶ್ಕಿಮ್ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಬಸ್ ಮತ್ತೊಂದು ಬಸ್ ನ್ನು ನಂದೂರ್ ನಾಕಾದಲ್ಲಿ ಓವರ್ ಟೇಕ್ ಮಾಡಲು ಯತ್ನಿಸಿದ್ದು, ಈ ವೇಳೆ ಢಿಕ್ಕಿ ಸಂಭವಿಸಿದೆ. ಆರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಇತರ ಸುಮಾರು 20 ಮಂದಿ ಗಾಯಗೊಂಡಿದ್ದು ಅವರನ್ನು ಬುಲ್ದಾನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. 32 ಪ್ರಯಾಣಿಕರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ಹತ್ತಿರದ ಗುರುದ್ವಾರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಮೃತಪಟ್ಟವರಲ್ಲಿ ಅಮರನಾಥ್ ದಿಂದ ವಾಪಸಾಗುತ್ತಿದ್ದಬಸ್  ಚಾಲಕನೂ ಸೇರಿದ್ದಾನೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಘಟನೆಯ ಕುರಿತು ಶೋಕ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ ಶಿಂಧೆ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News