ನಟ ಸುನೀಲ್‌ ಶೆಟ್ಟಿಗೂ ತಟ್ಟಿದ ಟೊಮ್ಯಾಟೋ ಬೆಲೆಯೇರಿಕೆ ಬಿಸಿ!

Update: 2023-07-12 14:58 GMT

ಮುಂಬೈ: ಗಗನಕ್ಕೇರಿರುವ ಟೊಮ್ಯಾಟೋ ಬೆಲೆಗಳು ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಅವರನ್ನೂ ತಟ್ಟಿದೆಯಂತೆ. ರೆಸ್ಟೋರೆಂಟ್‌ ಒಂದನ್ನೂ ನಡೆಸುತ್ತಿರುವ ಸುನೀಲ್‌ ಶೆಟ್ಟಿ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಟೊಮ್ಯಾಟೋ ಬೆಲೆ ಏರಿಕೆಯಿಂದಾಗಿ ಈಗ ಕಡಿಮೆ ಟೊಮ್ಯಾಟೋ ಖರೀದಿಸುತ್ತಿರುವುದಾಗಿ ಹೇಳಿದ್ದರು. ನಟ ತಮ್ಮ ಖಂಡಾಲ ಫಾರ್ಮ್‌ ಹೌಸ್‌ನಲ್ಲಿ ವಿವಿಧ ಹಣ್ಣು, ತರಕಾರಿಗಳನ್ನು ಬೆಳೆಸುತ್ತಿದ್ದಾರೆ.

“ನನ್ನ ಪತ್ನಿ ಮನಾ ಒಂದೆರಡು ದಿನಗಳಿಗೆ ಸಾಕಾಗುವಷ್ಟು ತರಕಾರಿ ಮಾತ್ರ ಖರೀದಿಸುತ್ತಾಳೆ, ನಾವು ತಾಜಾ ಉತ್ಪನ್ನಗಳನ್ನು ಸೇವಿಸಲು ಬಯಸುತ್ತೇವೆ. ಈ ದಿನಗಳಲ್ಲಿ ಟೊಮ್ಯಾಟೋ ಬೆಲೆಗಳು ಏರಿಕೆಯಾಗುತ್ತಿರುವುದು ನಮ್ಮ ಅಡುಗೆಮನೆಯನ್ನೂ ಬಾಧಿಸಿದೆ. ಈ ದಿನಗಳಲ್ಲಿ ನಾನು ಟೊಮ್ಯಾಟೋ ತಿನ್ನುವುದನ್ನು ಕಡಿಮೆಗೊಳಿಸಿದ್ದೇನೆ. ನಾನು ಸೂಪರ್‌ ಸ್ಟಾರ್‌ ಆಗಿರುವುದರಿಂದ ಈ ವಿಚಾರಗಳು ನನ್ನನ್ನು ಬಾಧಿಸದು ಎಂದು ಜನರು ಅಂದುಕೊಂಡಿರಬಹುದು. ಅದು ನಿಜವಲ್ಲ, ಇಂತಹ ವಿಚಾರಗಳನ್ನು ನಾವೂ ನಿಭಾಯಿಸಬೇಕಿದೆ,”ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News