ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ರಾಹುಲ್‌ ಗಾಂಧಿ

Update: 2024-08-15 07:16 GMT

Photo credit: indiatoday.in

ಹೊಸದಿಲ್ಲಿ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಇಂದು ರಾಜಧಾನಿಯ ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಹಾಗೂ ಈ ಮೂಲಕ ಕಳೆದ 10 ವರ್ಷಗಳಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಲೋಕಸಭೆಯ ಮೊದಲ ವಿಪಕ್ಷ ನಾಯಕರಾಗಿದ್ದಾರೆ.

ಬಿಳಿ ಕುರ್ತಾ ಸೂಟ್‌ ಧರಿಸಿದ್ದ ರಾಹುಲ್‌ ಗಾಂಧಿ ಒಲಿಂಪಿಕ್ಸ್‌ ಪದಕ ವಿಜೇತರಾದ ಮನು ಭಾಕರ್‌, ಸರಬ್‌ಜೋತ್‌ ಸಿಂಗ್‌, ಪಿ ಆರ್‌ ಶ್ರೀಜೇಶ್‌ ಮತ್ತಿತರರ ಜೊತೆ ಕುಳಿತಿರುವುದು ಕಾಣಿಸಿದೆ.

ಭಾರತದ ಒಲಿಂಪಿಕ್‌ ಕಂಚಿನ ಪದಕ ವಿಜೇತ ಹಾಕಿ ತಂಡ ಹಾಗೂ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಕೂಡ ರಾಹುಲ್‌ ಗಾಂಧಿ ಜೊತೆಗಿದ್ದರು.

ಲೋಕಸಭೆಯ ವಿಪಕ್ಷ ನಾಯಕ ಹುದ್ದೆ 2014ರಿಂದ 2024 ತನಕ ಖಾಲಿಯಿತ್ತು. ವಿಪಕ್ಷ ನಾಯಕನ ಸ್ಥಾನ ಪಡೆಯಲು ಯಾವುದೇ ವಿಪಕ್ಷ ಅಗತ್ಯವಿರುವಷ್ಟು ಸಂಖ್ಯೆಯ ಸಂಸದರನ್ನು ಹೊಂದಿರದೇ ಇರುವುದು ಇದಕ್ಕೆ ಕಾರಣವಾಗಿತ್ತು.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 99 ಸ್ಥಾನಗಳು ಲಭಿಸಿದ ನಂತರ ರಾಹುಲ್‌ ಗಾಂಧಿ ಅವರನ್ನು ಜೂನ್‌ 25ರಂದು ಲೋಕಸಭೆಯ ವಿಪಕ್ಷ ನಾಯಕರನ್ನಾಗಿ ನೇಮಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News