ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯಪಡಿಸುವ ಬಗ್ಗೆ ಚಿಂತನೆ: ಗುಜರಾತ್ ಸಿಎಂ

Update: 2023-08-01 05:43 GMT

ಗಾಂಧಿನಗರ: ಪ್ರೇಮವಿವಾಹಗಳಿಗೆ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆ ಬಗ್ಗೆ ಗುಜರಾತ್ ಸರ್ಕಾರ ಅಧ್ಯಯನ ನಡೆಸಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ಮೆಹ್ಸಾನದಲ್ಲಿ ಸರ್ದಾರ್ ಪಟೇಲ್ ಸಮುದಾಯ ನಡೆಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ವಿವಾಹಕ್ಕಾಗಿ ಹೆಣ್ಣುಮಕ್ಕಳ ಓಡಿಹೋಗುವ ವಿಷಯದ ಬಗ್ಗೆ ಅಧ್ಯಯನ ನಡೆಸಲು ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಮನವಿ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಇಂಥ ಪ್ರೇಮ ವಿವಾಹಗಳಿಗೆ ಪೋಷಕರ ಒಪ್ಪಿಗೆ ಕಡ್ಡಾಯ ಮಾಡುವ ವ್ಯವಸ್ಥೆ ಆರಂಭಿಸಬಹುದು ಎಂದು ವಿವರ ನೀಡಿದರು.

"ಇದಕ್ಕೆ ಸಂವಿಧಾನಾತ್ಮಕ ಬೆಂಬಲ ಇದೆ ಎಂದಾದಲ್ಲಿ, ಈ ಬಗ್ಗೆ ಅಧ್ಯಯನ ನಡೆಸಿ, ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.

ಗುಜರಾತ್ ಸರ್ಕಾರ 2021ರಲ್ಲಿ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇದರ ಅನ್ವಯ ವಿವಾಹದ ಮೂಲಕ ಕಡ್ಡಾಯ ಧಾರ್ಮಿಕ ಮತಾಂತರಕ್ಕೆ ಶಿಕ್ಷೆ ವಿಧಿಸಬಹುದಾಗಿದೆ. ತಿದ್ದುಪಡಿಯಾದ ಕಾಯ್ದೆಯಲ್ಲಿ ತಪ್ಪಿತಸ್ಥರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಗುಜರಾತ್ ಹೈಕೋರ್ಟ್ ಈ ಕಾಯ್ದೆಯ ಕೆಲ ಸೆಕ್ಷನ್‍ಗಳಿಗೆ ತಡೆ ವಿಧಿಸಿದೆ. ಇದನ್ನು ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದು, ಅಲ್ಲಿ ವಿಚಾರಣೆಗೆ ಬಾಕಿ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News