ಹಿಮಾಚಲಪ್ರದೇಶ ದಲ್ಲಿ ನಿಲ್ಲದ ಮಳೆ: 57ಕ್ಕೇರಿದ ಮೃತರ ಸಂಖ್ಯೆ

Update: 2023-08-16 17:14 GMT

Photo: ANI 

ಶಿಮ್ಲಾ: ಕೆಲವು ದಿನಗಳ ಹಿಂದೆ ಕುಸಿದ ಇಲ್ಲಿನ ಸಮ್ಮರ್ ಹಿಲ್ ಸಮೀಪದ ಶಿವ ದೇವಾಲಯದ ಅವಶೇಷಗಳಿಂದ ಮಹಿಳೆಯೋರ್ವರ ಮೃತದೇಹವನ್ನು ಹೊರ ತೆಗೆಯಲಾಗಿದೆ. ಇದರೊಂದಿಗೆ ಹಿಮಾಚಲಪ್ರದೇಶದಲ್ಲಿ ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 57ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲಪ್ರದೇಶದಲ್ಲಿ ರವಿವಾರದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಶಿಮ್ಲಾದ ಸಮ್ಮರ್ ಹಿಲ್, ಕೃಷ್ಣ ನಗರ ಹಾಗೂ ಫಾಗ್ಲಿಯಲ್ಲಿ ಭೂಕುಸಿತ ಸಂಭವಿಸಿದೆ. ‘‘ಕೃಷ್ಣ ನಗರ ಪ್ರದೇಶ ಹಾಗೂ ಸಮ್ಮರ್ ಹಿಲ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಮ್ಮರ್ ಹಿಲ್ ನಲ್ಲಿ ಒಂದು ಮೃತದೇಹ ಪತ್ತೆಯಾಗಿದೆ’’ ಎಂದು ಉಪ ಆಯುಕ್ತ ಆದಿತ್ಯ ನೇಗಿ ತಿಳಿಸಿದ್ದಾರೆ.

ಸಮ್ಮರ್ ಹಿಲ್ ನಲ್ಲಿ 13, ಫಾಗಿಲ್ ನಲ್ಲಿ 5 ಹಾಗೂ ಕೃಷ್ಣ ನಗರದಲ್ಲಿ 13 ಮೃತದೇಹಗಳು ಇದುವರೆಗೆ ಪತ್ತೆಯಾಗಿವೆ. ಇನ್ನೂ 10 ಮೃತದೇಹಗಳು ಕುಸಿದ ಶಿವದೇವಾಲಯದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಭೀತಿ ಪಡಲಾಗಿದೆ. ಕೃಷ್ಣನಗರದಿಂದ ಸುಮಾರು 15 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ಶಿಮ್ಲಾದ ಕೃಷ್ಣ ನಗರ ಪ್ರದೇಶದಲ್ಲಿ ಮಂಗಳವಾರ ಸಂಜೆ ಭಾರೀ ಭೂಕುಸಿತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಕನಿಷ್ಠ 8 ಮನೆಗಳು, 1 ಕಸಾಯಿಖಾನೆ ನೆಲಸಮಗೊಂಡಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News