ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಬಂಧನ

Update: 2025-03-04 13:27 IST
MK Faizy

ಎಂ.ಕೆ. ಫೈಝಿ (Photo source: Facebook)

  • whatsapp icon

ಹೊಸದಿಲ್ಲಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂಕೆ ಫೈಝಿಯವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಎಂಕೆ ಫೈಝಿಯನ್ನು ಸೋಮವಾರ ರಾತ್ರಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 28ರಂದು ಕೇರಳದಲ್ಲಿರುವ ಫೈಝಿ ಅವರ ನಿವಾಸದ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಎಸ್‌ಡಿಪಿಐಯು ನಿಷೇಧಿತ ಪಿಎಫ್ಐ ಯ ರಾಜಕೀಯ ವಿಭಾಗ. 2022ರ ಸೆಪ್ಟೆಂಬರ್ 28ರಂದು ಕಠಿಣ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ(UAPA) ಅಡಿಯಲ್ಲಿ ಗೃಹ ಸಚಿವಾಲಯ PFI ಮತ್ತು ಅದರ 8 ಅಂಗಸಂಸ್ಥೆಗಳನ್ನು ನಿಷೇಧಿಸಿತು. ಆ ಬಳಿಕ ಈಡಿ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ರಾಷ್ಟ್ರವ್ಯಾಪಿ ಪಿಎಫ್ಐ ಕಚೇರಿಗಳು ಮತ್ತು ನಾಯಕರ ಮನೆಗಳ ಮೇಲೆ ದಾಳಿ ನಡೆಸಿದೆ. ಕೆಲ ನಾಯಕರನ್ನು ಬಂಧಿಸಿ ಅವರಿಂದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

2021ರಿಂದ ಹಿರಿಯ ಪದಾಧಿಕಾರಿಗಳು ಸೇರಿದಂತೆ 26 ಪಿಎಫ್ಐ ಸದಸ್ಯರನ್ನು ಈಡಿ ಬಂಧಿಸಿದೆ ಮತ್ತು 9 ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದೆ.

ಅಕ್ಟೋಬರ್ 2024ರಲ್ಲಿ ಕುವೈತ್, ಒಮನ್, ಖತರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಸಿಂಗಾಪುರ ಮತ್ತು ಗಲ್ಫ್ ದೇಶಗಳಲ್ಲಿ PFI ಸುಮಾರು 13,000 ಸಕ್ರಿಯ ಸದಸ್ಯರನ್ನು ಹೊಂದಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಈ ಸದಸ್ಯರು ವಿದೇಶಗಳಲ್ಲಿ ಹಣವನ್ನು ಸಂಗ್ರಹಿಸುವಲ್ಲಿ ತೊಡಗಿದ್ದರು. ನಂತರ ಅಕ್ರಮ ಹವಾಲಾ ಮಾರ್ಗಗಳ ಮೂಲಕ ಭಾರತಕ್ಕೆ ವರ್ಗಾಯಿಸುತ್ತಿದ್ದರು ಎಂದು ಆರೋಪಿಸಿತ್ತು. ಇದಲ್ಲದೆ ತನಿಖೆಯ ಭಾಗವಾಗಿ 56 ಕೋಟಿಗೂ ಅಧಿಕ ಮೌಲ್ಯದ ಪಿಎಫ್ಐ ಆಸ್ತಿಯನ್ನು ಈಡಿ ಜಪ್ತಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News