ತೆಲಂಗಾಣದ ಮಾಜಿ ಸಚಿವ ಕೆ.ಟಿ.ಆರ್. ಸಂಬಂಧಿಯ ಫಾರ್ಮ್ ಹೌಸ್‌ಗೆ ಪೊಲೀಸ್ ದಾಳಿ

Update: 2024-10-27 17:32 GMT

PC : NDTV

ಹೈದರಾಬಾದ್ : ಬಿ.ಆರ್.ಎಸ್.ಪಕ್ಷದ ನಾಯಕ ಹಾಗೂ ತೆಲಂಗಾಣದ ಮಾಜಿ ಸಚಿವ ಕೆ.ಟಿ.ರಾಮರಾವ್ ಅವರ ಭಾವ ರಾಜ್ ಪಕಲಗೆ ಸೇರಿದ ಜನವಾಡದ ಫಾರ್ಮ್‌ಹೌಸ್‌ನಲ್ಲಿ ಶನಿವಾರ ರಾತ್ರಿ ಪಾರ್ಟಿ ನಡೆಯುತ್ತಿದ್ದಾಗ ಸೈಬರಾಬಾದ್ ಪೊಲೀಸರು ದಾಳಿ ನಡೆಸಿದ್ದಾರೆ.

30ಕ್ಕೂ ಅಧಿಕ ಮಂದಿ ಪಾರ್ಟಿಯಲ್ಲಿ ನಡೆಸುತ್ತಿದ್ದರೆನ್ನಲಾಗಿದೆ. ಸ್ಥಳೀಯ ನಿವಾಸಿಗಳು ದೂರು ನೀಡಿದ್ದರಿಂದ ಸೈಬರಾಬಾದ್‌ ನ ವಿಶೇಷ ಕಾರ್ಯಾಚರಣಾ ತಂಡವು ಈ ದಾಳಿ ನಡೆಸಿತ್ತು. ಸ್ಥಳದಿಂದ ಭಾರೀ ಪ್ರಮಾಣದ ವಿದೇಶಿ ಮದ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರನ್ನು ಮಾದಕದ್ರವ್ಯ ಸೇವನೆ ಕುರಿತು ತಪಾಸಣೆಗೊಳಪಡಿಸಲಾಯಿತು. ಅವರಲ್ಲಿ ವಿಜಯ್ ಎಂಬಾತ ಕೊಕೇನ್ ಮಾದಕದ್ರವ್ಯ ಸೇವಿಸಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜುಪಕಲ ಹಾಗೂ ವಿಜಯ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News